
ರಾಯಚೂರ, 06 ಮೇ (ಹಿ.ಸ.) :
ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2026-27ನೇ ಶೈಕ್ಷಣಿಕ ಸಾಲಿನಿಂದ ಇಲಾಖೆಯಡಿಯಲ್ಲಿ ನೂತನವಾಗಿ ಮಹಿಳಾ ಪದವಿ ಪೂರ್ವ ಕಾಲೇಜ್ ಆರಂಭಿಸಲು ಮಂಜೂರಾತಿ ನೀಡಲಾಗಿದ್ದು, ಈ ಕಾಲೇಜು ಆರಂಭಿಸಲು ನಿರ್ವಹಣೆಗೆ ರಾಯಚೂರು ನಗರದಲ್ಲಿ ಪಿಡ್ಲೂಡಿ ಇಲಾಖೆ ನಿಗಧಿ ಪಡಿಸುವ ಮಾಸಿಕ ಬಾಡಿಗೆ ಆಧಾರದ ಮೇಲೆ 20 ಕೊಠಡಿಗಳು ಮತ್ತು ಎಲ್ಲಾ ಮೂಲಭೂತ ಸೌಕರ್ಯ ಒಳಗೊಂಡಿರುವ ಸುಸಜ್ಜಿತ ಕಟ್ಟಡ ಬಾಡಿಗೆ ನೀಡಲು ಸಿದ್ಧವಿರುವ ಆಸಕ್ತ ಕಟ್ಟಡಗಳ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕಟ್ಟಡಗಳ ಮಾಲೀಕರು ಕಟ್ಟಡ ಛಾಯಚಿತ್ರ ಮತ್ತು ದಾಖಲೆಗಳೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಅರಿವು ಮೂಡಿಸುವ ಮಾಹಿತಿ ಕೇಂದ್ರ ಹಾಸ್ಮೀಯಾ ಶಾಲೆ ಕಂಪೌ0ಡ ಹಿಂದುಗಡೆ ಬಾಲಭವನ ಹತ್ತಿರ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್