ಅಲ್ಪಸಂಖ್ಯಾತರ ಇಲಾಖೆ ಅತಿಥಿ ಉಪನ್ಯಾಸಕರ ನೇಮಕ
ರಾಯಚೂರು, 06 ಮೇ (ಹಿ.ಸ.) : ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2026-27ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಮಹಿಳಾ ಪದವಿ ಪೂರ್ವ ಕಾಲೇಜ್ ಅನ್ನು ಚಂದ್ರಬ0ಡಾ ರಸ್ತೆಯ ವಿಜ್ಞಾನ್ ಶಾಲೆಯ ಎದುರುಗಡೆ ಇರುವ ಇಲಾಖೆಯ ಕಟ್ಟಡದಲ್ಲಿ ಆರಂಭಿಸಲಾಗುತ್ತಿದ್ದು, ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ನ
ಅಲ್ಪಸಂಖ್ಯಾತರ ಇಲಾಖೆ ಅತಿಥಿ ಉಪನ್ಯಾಸಕರ ನೇಮಕ


ರಾಯಚೂರು, 06 ಮೇ (ಹಿ.ಸ.) :

ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2026-27ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಮಹಿಳಾ ಪದವಿ ಪೂರ್ವ ಕಾಲೇಜ್ ಅನ್ನು ಚಂದ್ರಬ0ಡಾ ರಸ್ತೆಯ ವಿಜ್ಞಾನ್ ಶಾಲೆಯ ಎದುರುಗಡೆ ಇರುವ ಇಲಾಖೆಯ ಕಟ್ಟಡದಲ್ಲಿ ಆರಂಭಿಸಲಾಗುತ್ತಿದ್ದು, ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ವಿಷಯದ 1 ಉಪನ್ಯಾಸಕರ ಹುದ್ದೆಗೆ ಎಂ.ಎ. ಬಿ.ಎಡ್, ಇಂಗ್ಲೀಷ್ ವಿಷಯದ 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿಎಡ್, ಹಿಂದಿ 1 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ಉರ್ದು 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ಇತಿಹಾಸ 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ಅರ್ಥಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ರಾಜ್ಯಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ಸಮಾಜಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎ, ಬಿ.ಎಡ್, ಕಂಪ್ಯೂಟರ್ ಸೈನ್ಸ್ 1 ಉಪನ್ಯಾಸಕರ ಹುದ್ದೆಗೆ ಎಂ.ಕಾ0, ಬಿ.ಎಡ್, ವ್ಯವಹಾರ ಅಧ್ಯಯನ 1 ಉಪನ್ಯಾಸಕರ ಹುದ್ದೆಗೆ ಎಂ.ಕಾ0, ಬಿ.ಎಡ್, ಅಕೌಂಟೆನ್ಸಿ/ ಲೆಕ್ಕಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಕಾ0, ಬಿ.ಎಡ್, ಭೌತಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎಸ್ಸಿ, ಬಿ.ಎಡ್, ರಸಾಯನಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎಸ್ಸಿ, ಬಿ.ಎಡ್, ಗಣಿತಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎಸ್ಸಿ, ಬಿ.ಎಡ್, ಜೀವಶಾಸ್ತç 1 ಉಪನ್ಯಾಸಕರ ಹುದ್ದೆಗೆ ಎಂ.ಎಸ್ಸಿ, ಬಿ.ಎಡ್ ಪಡೆದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಡಿಗ್ರಿ ಅಂಕಪಟ್ಟಿ, ಸ್ನಾತಕೋತ್ತರ ಪದವಿಯ ಅಂಕಪಟ್ಟಿ, ಬಿಇಡಿ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ಗಳ ಜೆರಾಕ್ಸ್ ಪ್ರತಿಗಳೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿ ಮೇ.11ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಸಂಪರ್ಕ ಕೇಂದ್ರದ ಸಂಖ್ಯೆ: 9731028420 ಅಥವಾ 9845494630ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande