ಹಿಮಾಚಲದ ಪ್ರವಾಸಿಗರ ಕಾರು ಕಂದಕಕ್ಕೆ ; 8 ಮಂದಿ ಮೃತಪಟ್ಟಿರುವ ಶಂಕೆ
ಶಿಮ್ಲಾ, 31 ಮೇ (ಹಿ.ಸ.) : ಆ್ಯಂಕರ್ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಛತ್ತೀಸ್ಗಢ ಮೂಲದ ಏಳು ಪ್ರವಾಸಿಗರು ಹಾಗೂ ವಾಹನ ಚಾಲಕ ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಚುರಾಹ್ ಉಪವಿಭಾಗದ ಬೈರಾಗಢ–ಸಾಚ್ ಪಾಸ್–ಕಿಲಾಡ್ ರಸ್ತೆಯಲ್ಲಿ ಮೇ
ಘಟನಾ ಸ್ಥಳ


ಶಿಮ್ಲಾ, 31 ಮೇ (ಹಿ.ಸ.) :

ಆ್ಯಂಕರ್ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಛತ್ತೀಸ್ಗಢ ಮೂಲದ ಏಳು ಪ್ರವಾಸಿಗರು ಹಾಗೂ ವಾಹನ ಚಾಲಕ ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಚುರಾಹ್ ಉಪವಿಭಾಗದ ಬೈರಾಗಢ–ಸಾಚ್ ಪಾಸ್–ಕಿಲಾಡ್ ರಸ್ತೆಯಲ್ಲಿ ಮೇ 29ರ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದೆ.

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎರ್ಟಿಗಾ ಕಾರು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ್ದು, ಅಪಘಾತದ ನಂತರ ವಾಹನದಲ್ಲಿದ್ದ ಎಲ್ಲರೂ ನಾಪತ್ತೆಯಾಗಿದ್ದಾರೆ. ಸ್ಥಳದ ಪರಿಸ್ಥಿತಿ ಹಾಗೂ ವಾಹನದ ಸ್ಥಿತಿಯನ್ನು ಗಮನಿಸಿದರೆ ಯಾರೂ ಬದುಕುಳಿದಿರುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಛತ್ತೀಸ್ಗಢದ ಎರಡು ಕುಟುಂಬಗಳಿಗೆ ಸೇರಿದ ಏಳು ಮಂದಿ ಪ್ರವಾಸಕ್ಕಾಗಿ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದರು. ಅವರು ಚಂಬಾ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಡಲ್ಹೌಸಿಯ ಹೋಟೆಲ್ನಲ್ಲಿ ತಂಗಿದ್ದು, ಮೇ 29ರಂದು ಸಾಚ್ ಪಾಸ್ ವೀಕ್ಷಣೆಗೆ ತೆರಳಿದ್ದರು. ಸಂಜೆ ವೇಳೆಗೆ ಹೋಟೆಲ್ಗೆ ಮರಳಬೇಕಿದ್ದ ಅವರು ರಾತ್ರಿ ತಡವಾದರೂ ಹಿಂದಿರುಗದ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತವು ಪೊಲೀಸರಿಗೆ ಮಾಹಿತಿ ನೀಡಿತ್ತು.

ಇದಾದ ಬಳಿಕ ಆರಂಭವಾದ ಶೋಧ ಕಾರ್ಯಾಚರಣೆಯಲ್ಲಿ, ಪ್ರವಾಸಿಗರನ್ನು ಸಾಗಿಸುತ್ತಿದ್ದ ಎರ್ಟಿಗಾ ಕಾರು (ಎಚ್ಪಿ-01ಸಿ-2133) ಬೈರಾಗಢ–ಸಾಚ್ ಪಾಸ್–ಕಿಲಾಡ್ ರಸ್ತೆಯ ಆಳವಾದ ಕಂದಕಕ್ಕೆ ಉರುಳಿರುವುದು ಪತ್ತೆಯಾಯಿತು. ಅಪಘಾತದಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರ ಅವಶೇಷಗಳು ಚದುರಿಹೋಗಿವೆ.

ಅಪಘಾತಕ್ಕೀಡಾದ ವಾಹನದಲ್ಲಿ ಛತ್ತೀಸ್ಗಢದ ಅರವಿಂದ್, ಅವರ ಪತ್ನಿ ಪ್ರಾಚಿ, ಪುತ್ರರಾದ ದರ್ಶ್ ಮತ್ತು ಅಪಶದ್, ಪಿ.ಜಿ. ಕಾರ್ತಿಗೇಯನ್, ಅವರ ಪತ್ನಿ ಮಣಿಮಾಲಾ, ಪುತ್ರ ನಂದನ್ ಹಾಗೂ ಚಾಲಕ ವಿಶ್ವಾಸ್ ಪ್ರಯಾಣಿಸುತ್ತಿದ್ದರು. ಚಾಲಕ ವಿಶ್ವಾಸ್ ಚಂಬಾ ಜಿಲ್ಲೆಯ ಡಲ್ಹೌಸಿ ಪ್ರದೇಶದ ನಿವಾಸಿಯಾಗಿದ್ದಾರೆ.

ಚಂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಕ್ಲಾನಿ ಮಾಹಿತಿ ನೀಡಿ, ಅಪಘಾತದ ಬಗ್ಗೆ ತಿಳಿದ ತಕ್ಷಣವೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಆದರೆ ಅಪಘಾತ ಸಂಭವಿಸಿರುವ ಪ್ರದೇಶ ಅತ್ಯಂತ ದುರ್ಗಮವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande