
ಹುಬ್ಬಳ್ಳಿ, 29 ಮೇ (ಹಿ.ಸ.) :
ಆ್ಯಂಕರ್ : ದಾವಣಗೆರೆ ರೈಲು ನಿಲ್ದಾಣದ ಯಾರ್ಡ್ ಪ್ರದೇಶದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಘೋಷಿಸಿದೆ.
ಕಾಮಗಾರಿ ಅವಧಿಯಲ್ಲಿ ಕೆಲವು ರೈಲುಗಳನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗಿದ್ದು, ಕೆಲವು ರೈಲುಗಳಿಗೆ ಮರು-ವೇಳಾಪಟ್ಟಿ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.
ನಿಯಂತ್ರಣಕ್ಕೆ ಒಳಪಡುವ ರೈಲುಗಳು : ಮೇ 30, 2026 ರಿಂದ ಜೂನ್ 8, 2026 ರವರೆಗೆ ವಾಸ್ಕೋ-ಡ-ಗಾಮಾದಿಂದ ಸಂಚರಿಸುವ ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ – ಯಶವಂತಪುರ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಜೂನ್ 1, 2026 ರಂದು ಉದಯಪುರ ಸಿಟಿಯಿಂದ ಹೊರಡುವ ರೈಲು ಸಂಖ್ಯೆ 19667 ಉದಯಪುರ ಸಿಟಿ – ಮೈಸೂರು ಹಮ್ಸಫರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಮೇ 31, 2026 ರಿಂದ ಜೂನ್ 9, 2026 ರವರೆಗೆ ಧಾರವಾಡದಿಂದ ಹೊರಡುವ ರೈಲು ಸಂಖ್ಯೆ 12726 ಧಾರವಾಡ – ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ದೈನಂದಿನ ಎಕ್ಸ್ಪ್ರೆಸ್ ರೈಲನ್ನು 50 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಮೇ 31, 2026 ರಿಂದ ಜೂನ್ 9, 2026 ರವರೆಗೆ ಅರಸೀಕೆರೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲನ್ನು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಮರು-ವೇಳಾಪಟ್ಟಿ : ಮೇ 31, 2026 ರಿಂದ ಜೂನ್ 9, 2026 ರವರೆಗೆ ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು – ಮೈಸೂರು ಒಡೆಯರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ತನ್ನ ನಿಗದಿತ ವೇಳೆಗೆ ಹೋಲಿಸಿದರೆ 20 ನಿಮಿಷ ತಡವಾಗಿ ಹೊರಡಲಿದೆ.
ಮಾರ್ಗ ಬದಲಾವಣೆ : ಮೇ 31, 2026 ರಿಂದ ಜೂನ್ 9, 2026 ರವರೆಗೆ ರೈಲು ಸಂಖ್ಯೆ 56529 ಹರಿಹರ – ಹೊಸಪೇಟೆ ಪ್ಯಾಸೆಂಜರ್ ರೈಲು ಹರಿಹರ, ಅಮರಾವತಿ ಕಾಲೋನಿ ಹಾಗೂ ತೆಲಿಗಿ ಮಾರ್ಗವಾಗಿ ಸಂಚರಿಸಲಿದೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ಈ ರೈಲಿಗೆ ತಾತ್ಕಾಲಿಕ ನಿಲುಗಡೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.