ಮಾಲಿನ್ಯಕಾರಕ ಕಾರ್ಖಾನೆಗಳ ವಿರುದ್ದ 211 ನೇ ದಿನದ ಧರಣಿ
ಕೊಪ್ಪಳ, 29 ಮೇ (ಹಿ.ಸ.) : ಆ್ಯಂಕರ್ : ಜನರ ಬದುಕು ಸರ್ವನಾಶ ಮಾಡಿ ಜಿಡಿಪಿ ಹೆಚ್ಚಿಸ್ವೀವಿ, ರಫ್ತು ಹೆಚ್ಚಿಸ್ತೀವಿ ಅಂತ ಹೋದ್ರೆ ಅದರ ವಿರುದ್ದ ಜನ ರೊಚ್ಚಿಗೇಳ್ತಾರೆ. ಜನಪ್ರತಿನಿಧಿಗಳು ಆಡಳಿತ ವರ್ಗ ಅಭಿವೃದ್ಧಿ ಮತ್ತು ಜನರ ಬದುಕು ಎರಡೂ ಸಮತೋಲನ ಇರುವಂತೆ ನೋಡಬೇಕು. ಅಭಿವೃದ್ಧಿ ಮತ್ತು ಜನರ ಬದುಕು
ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಾಗದು: ಪತ್ರಕರ್ತ ಗೌರೀಶ


ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಾಗದು: ಪತ್ರಕರ್ತ ಗೌರೀಶ


ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಾಗದು: ಪತ್ರಕರ್ತ ಗೌರೀಶ


ಕೊಪ್ಪಳ, 29 ಮೇ (ಹಿ.ಸ.) :

ಆ್ಯಂಕರ್ : ಜನರ ಬದುಕು ಸರ್ವನಾಶ ಮಾಡಿ ಜಿಡಿಪಿ ಹೆಚ್ಚಿಸ್ವೀವಿ, ರಫ್ತು ಹೆಚ್ಚಿಸ್ತೀವಿ ಅಂತ ಹೋದ್ರೆ ಅದರ ವಿರುದ್ದ ಜನ ರೊಚ್ಚಿಗೇಳ್ತಾರೆ. ಜನಪ್ರತಿನಿಧಿಗಳು ಆಡಳಿತ ವರ್ಗ ಅಭಿವೃದ್ಧಿ ಮತ್ತು ಜನರ ಬದುಕು ಎರಡೂ ಸಮತೋಲನ ಇರುವಂತೆ ನೋಡಬೇಕು. ಅಭಿವೃದ್ಧಿ ಮತ್ತು ಜನರ ಬದುಕು ಹಸನೂ ಆಗಬೇಕು. ಬದುಕು ಹಸನಾಗದಿದ್ದರೆ ಹಾಳಾಗದಂತೆ ಉಳಿಯಬೇಕು ಎಂದು ಖ್ಯಾತ ಪತ್ರಕರ್ತ ಗೌರೀಶ್ ಅಕ್ಕಿ ಹೇಳಿದರು.

ಅವರು ಇಂದು ಕೊಪ್ಪಳ ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಾಲಿನ್ಯಕಾರಕ ಕಾರ್ಖಾನೆಗಳ ವಿರುದ್ದ ನಡೆದಿರುವ 211 ನೇ ದಿನದ ಧರಣಿಯಲ್ಲಿ ಮಾತನಾಡಿದರು.

ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯ ಹಳ್ಳಿಗಳಿಗೆ ಸೀಮಿತವಾಗದೆ ಕೊಪ್ಪಳಕ್ಕೂ ಬಂದಿದೆ. ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಜನ ಎಚ್ಚೆತ್ತರೆ ಒಳ್ಳೆಯದು. ಹಿರಿಯರು ಎಚ್ಚೆತ್ತು ಹೋರಾಟಕ್ಕೆ ಇಳಿದಿದ್ದಾರೆ. ಅವರ ಜೊತೆ ಕೊಪ್ಪಳ ಜನ ಕೈ ಜೋಡಿಸಬೇಕು.

ನಾನು ಕೂಡ ಕೊಪ್ಪಳ ಜಿಲ್ಲೆಯವನು. ನಮ್ಮ ಜಿಲ್ಲೆ ಉತ್ತಮ ಪರಿಸರಕ್ಕೆ ಹೆಸರಾಗಿತ್ತು. ಇಂದು ಮಾಲಿನ್ಯಕಾರಕ ಕಾರ್ಖಾನೆಗಳಿಂದ ಪರಿಸರ ಹಾಳಾಗ್ತಿದೆ ಎಷ್ಟೋ ಗ್ರಾಮಗಳ ಪರಿಸರ ಮತ್ತು ಜನಜೀವನ ಮಾಲಿನ್ಯದಿಂದ ಬಾಧಿತವಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಈ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೇಗ ಕಾರ್ಯಪ್ರವೃತ್ತರಾಗಬೇಕು ಎಂದು ಗೌರೀಶ್ ಅಕ್ಕಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾಧ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ಡಾ. ಬಸವರಾಜ ಪೂಜಾರ, ರಾಜಶೇಖರ ಏಳುಬಾವಿ, ಚಾರಣ ಬಳಗದ ಸಿ.ಬಿ.ಪಾಟೀಲ್, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಮಹೇಶ ಖಾನಾಪೂರ, ಹುಲಿಗೇಶ ಭೋವಿ, ಮಂಜುನಾಥ ಕವಲೂರು ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande