ಬಂಜಾರ ಸಮಾಜದ ಭವಿಷ್ಯ ಯುವಕರ ಕೈಯಲ್ಲಿ : ರವಿಕಾಂತ ಅಂಗಡಿ
ಗದಗ, 29 ಮೇ (ಹಿ.ಸ.) : ಆ್ಯಂಕರ್ : ಬಂಜಾರ ಸಮಾಜದ ಅಭಿವೃದ್ಧಿ, ಸಂಘಟನೆ ಹಾಗೂ ಸಂಸ್ಕೃತಿ ಉಳಿವಿನಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಮಾಜದ ಭವಿಷ್ಯ ಇಂದಿನ ಯುವಪೀಳಿಗೆಯ ಕೈಯಲ್ಲಿದೆ ಎಂದು ಗೋರಸೇನಾ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಹೇಳಿದರು. ಗದಗ ಜಿಲ್ಲೆಯ ಮಜೂರ ತಾಂ
ಫೋಟೋ


ಗದಗ, 29 ಮೇ (ಹಿ.ಸ.) :

ಆ್ಯಂಕರ್ : ಬಂಜಾರ ಸಮಾಜದ ಅಭಿವೃದ್ಧಿ, ಸಂಘಟನೆ ಹಾಗೂ ಸಂಸ್ಕೃತಿ ಉಳಿವಿನಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಮಾಜದ ಭವಿಷ್ಯ ಇಂದಿನ ಯುವಪೀಳಿಗೆಯ ಕೈಯಲ್ಲಿದೆ ಎಂದು ಗೋರಸೇನಾ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಹೇಳಿದರು.

ಗದಗ ಜಿಲ್ಲೆಯ ಮಜೂರ ತಾಂಡಾದಲ್ಲಿ ಯುವಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಯುವಕರು ಸಂಘಟಿತರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.

ತಾಂಡಾಗಳಲ್ಲಿ ಬಾಲಸಂಸ್ಕಾರ ಕೇಂದ್ರಗಳನ್ನು ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಸಮಾಜವನ್ನು ಬಲಪಡಿಸುವ ಕೆಲಸ ಆಗಬೇಕಿದ್ದು, ಯುವಕರು ಈ ನಿಟ್ಟಿನಲ್ಲಿ ಮುನ್ನಡೆ ವಹಿಸಬೇಕು ಎಂದು ಅವರು ಕರೆ ನೀಡಿದರು.

ಗದಗದಲ್ಲಿ ಮೇ 31ರಂದು ನಡೆಯಲಿರುವ ಬೃಹತ್ ಹಿಂದೂ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಯುವಕರಿಗೆ ಮನವಿ ಮಾಡಿದರು.

ಇದೇ ವೇಳೆ ತಾಂಡಾಗಳಲ್ಲಿ ಎದುರಾಗುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಮಾತನಾಡಿದ ರವಿಕಾಂತ ಅಂಗಡಿ, ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಮತ್ತು ಜಾಗೃತಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. “ತಾಂಡಾಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅಗತ್ಯ. ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಸಮಾಜವನ್ನು ಬಲಪಡಿಸಬೇಕು” ಎಂದು ಹೇಳಿದರು.

ಸಭೆಯಲ್ಲಿ ತುಕಾರಾಮ ಲಮಾಣಿ, ಗಣೇಶ ಚನ್ನಪ್ಪ ಲಮಾಣಿ, ಪ್ರಕಾಶ ಈಶ್ವರ ಲಮಾಣಿ, ಈರಣ್ಣ ಶಿವಪ್ಪ ಲಮಾಣಿ, ಶರಣಪ್ಪ ಕಾಶಪ್ಪ ಲಮಾಣಿ, ಕೀರಣ ರವಿ ರಾಠೋಡ್, ರವಿ ಸೋಮಲಪ್ಪ ಲಮಾಣಿ, ತುಲಾರಾಮ ಈರಪ್ಪ ಲಮಾಣಿ, ವಿನೋದ ಈರಪ್ಪ ಲಮಾಣಿ, ಪ್ರಭು ಸೋಮಲಪ್ಪ ಲಮಾಣಿ, ಸಂಜು ಮಾನಪ್ಪ ಲಮಾಣಿ, ಅಶೋಕ್ ಲಮಾಣಿ, ಸುರೇಶ್ ಲಮಾಣಿ, ಅಪ್ಪು ಲಮಾಣಿ, ಕೇಶಪ್ಪ ಹೇಮಲಪ್ಪ ಲಮಾಣಿ, ವಿಕಾಸ್ ಲಮಾಣಿ, ಚೆನ್ನಪ್ಪ ಲಮಾಣಿ, ಜಗದೀಶ ಲಮಾಣಿ, ಸಂಜು ಕೆ. ಲಮಾಣಿ, ಮುತ್ತು ಶಂಕ್ರಪ್ಪ ಲಮಾಣಿ, ಶೇಖರ್ ಲಮಾಣಿ, ಚಂದ್ರು ಲಮಾಣಿ, ಪ್ರಶಾಂತ ಠಾವರೇಪ್ಪ ಲಮಾಣಿ ಹಾಗೂ ರಮೇಶ್ ಮಾನಪ್ಪ ಲಮಾಣಿ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande