ಅಮರನಾಥ ಯಾತ್ರೆ ಭದ್ರತಗೆ 670 ಅರೆಸೈನಿಕ ಪಡೆ ಕಂಪನಿಗಳ ನಿಯೋಜನೆ
ಶ್ರೀನಗರ, 29 ಮೇ (ಹಿ.ಸ.) : ಆ್ಯಂಕರ್ : ಅಮರನಾಥ ಗುಹಾ ದೇವಸ್ಥಾನ ಯಾತ್ರೆಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಬಾರಿ 670 ಅರೆಸೈನಿಕ ಪಡೆ ಕಂಪನಿಗಳನ್ನು ನಿಯೋಜಿಸಲು ತೀರ್ಮಾನಿಸಿದೆ. 57 ದಿನಗಳ ಕಾಲ ನಡೆಯಲಿರುವ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಿ ಆಗಸ್ಟ್ 28ರವ
ಅಮರನಾಥ ಯಾತ್ರೆ ಭದ್ರತಗೆ 670 ಅರೆಸೈನಿಕ ಪಡೆ ಕಂಪನಿಗಳ ನಿಯೋಜನೆ


ಶ್ರೀನಗರ, 29 ಮೇ (ಹಿ.ಸ.) :

ಆ್ಯಂಕರ್ : ಅಮರನಾಥ ಗುಹಾ ದೇವಸ್ಥಾನ ಯಾತ್ರೆಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಬಾರಿ 670 ಅರೆಸೈನಿಕ ಪಡೆ ಕಂಪನಿಗಳನ್ನು ನಿಯೋಜಿಸಲು ತೀರ್ಮಾನಿಸಿದೆ. 57 ದಿನಗಳ ಕಾಲ ನಡೆಯಲಿರುವ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಿ ಆಗಸ್ಟ್ 28ರವರೆಗೆ ನಡೆಯಲಿದೆ. ಈ ವರ್ಷ ದೇಶದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ದಕ್ಷಿಣ ಕಾಶ್ಮೀರ ಹಿಮಾಲಯ ಪ್ರದೇಶದಲ್ಲಿರುವ ಪವಿತ್ರ ಹಿಮಶಿಲೆಯ ದರ್ಶನಕ್ಕಾಗಿ ಸಾವಿರಾರು ಯಾತ್ರಿಕರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿಸಲಾಗಿದೆ. ಅಮರನಾಥ ಗುಹಾ ದೇವಸ್ಥಾನ, ಯಾತ್ರಾ ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳ ಕೆಲವು ಭಾಗಗಳು ಹಾಗೂ ಎತ್ತರ ಪ್ರದೇಶಗಳಲ್ಲಿ ಭಾರತೀಯ ಸೇನೆಯನ್ನೂ ನಿಯೋಜಿಸಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯವು ಜಮ್ಮು-ಕಾಶ್ಮೀರದ ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಂಪೂರ್ಣ ಭದ್ರತಾ ಯೋಜನೆಯನ್ನು ಅಂತಿಮಗೊಳಿಸಿದೆ. ಜಮ್ಮು-ಕಾಶ್ಮೀರ ಪ್ರವೇಶ ದ್ವಾರವಾದ ಲಖನ್ಪುರದಿಂದ ಅಮರನಾಥ ಗುಹೆಯವರೆಗೆ ಸಿಆರ್ಪಿಎಫ್ ಸೇರಿದಂತೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆ ಮಾಡಲಾಗುತ್ತದೆ.

ನೂನ್ವಾನ್ (ಪಹಲ್ಗಾಮ್) ಮತ್ತು ಬಾಲ್ಟಲ್ ಬೇಸ್ ಕ್ಯಾಂಪ್ಗಳು, ಜಮ್ಮುವಿನ ಯಾತ್ರಿ ನಿವಾಸ, ಪಠಾಣ್ಕೋಟ್-ಜಮ್ಮು ಹಾಗೂ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಕಠಿಣ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚುವರಿ ಅರೆಸೈನಿಕ ಪಡೆಗಳು ಜೂನ್ ಆರಂಭದಲ್ಲೇ ಕೇಂದ್ರಾಡಳಿತ ಪ್ರದೇಶಕ್ಕೆ ಆಗಮಿಸಲಿದ್ದು, ಯಾತ್ರೆ ಆರಂಭಕ್ಕೂ ಒಂದು ವಾರ ಮುನ್ನ ಸಂಪೂರ್ಣ ನಿಯೋಜನೆ ಪೂರ್ಣಗೊಳ್ಳಲಿದೆ.

ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯೂ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ಪಡೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲ್ಟಲ್ ಮತ್ತು ಚಂದನ್ವಾರಿ ಮಾರ್ಗಗಳ ರೈಲು ಹಳಿಗಳ ಭದ್ರತೆಗೂ ವಿಶೇಷ ಆದ್ಯತೆ ನೀಡಲಾಗಿದೆ. ಪವಿತ್ರ ಗುಹಾ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗರಿಷ್ಠ ಭದ್ರತಾ ಕವಚ ಒದಗಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೋಡ್ ಓಪನಿಂಗ್ ಪಾರ್ಟಿ (ಆರ್ಒಪಿ)ಗಳೊಂದಿಗೆ ಅರೆಸೈನಿಕ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ನಿಯಮಿತ ಗಸ್ತು ತಿರುಗಲಿದ್ದಾರೆ.

ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಮೂಲಕ ಶ್ರೀನಗರ ತಲುಪುವ ಸಾಧ್ಯತೆ ಇರುವುದರಿಂದ ಜಮ್ಮು-ಶ್ರೀನಗರ ರೈಲು ಮಾರ್ಗದಲ್ಲಿಯೂ ಭದ್ರತೆ ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ಜಮ್ಮು ಮತ್ತು ಶ್ರೀನಗರ ನಡುವೆ ಎರಡು ರೈಲುಗಳು ಸಂಚರಿಸುತ್ತಿದ್ದು, ಯಾತ್ರಾ ಅವಧಿಯಲ್ಲಿ ಇನ್ನಷ್ಟು ರೈಲುಗಳನ್ನು ಆರಂಭಿಸುವ ಸಾಧ್ಯತೆಯೂ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande