
ರಾಯಚೂರು, 29 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸಂದರ್ಶನ ಮೂಲಕ ನೇಮಕಾತಿ ನಡೆಸುತ್ತಿದ್ದು, ಆಸಕ್ತರು ದಿನಾಂಕ: 29-05-2026 ರಿಂದ 6-06-2026ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಸಂದರ್ಶನ ಭಾಗವಹಿಸಬಹುದಾಗಿದೆ.
ಈ ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಮಾಜಿ ಸೈನಿಕರು ತಮ್ಮ ಗುರುತಿನ ಚೀಟಿ ಮತ್ತು ಸೇನಾ ಸೇವಾ ಪುಸ್ತಕಗಳೊಂದಿಗೆ ಸಂದರ್ಶನದಕ್ಕೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಿ.ಎಸ್.ರಮೇಶ, ಉಪ ನಿರ್ದೇಶಕರು ಹಾಗೂ ಬಂದೀಖಾನೆಗಳ ಮುಖ್ಯ ಅಧಿಕ್ಷಕರು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಅಕಾಡೆಮಿ, ಕಾಳಿದಾಸ ರಸ್ತೆ, ಗಾಂಧಿನಗರ, ಮಹಾಬೋಧಿ ಸೊಸೈಟಿಯ ಪಕ್ಕ ಫ್ರೀಡಂ ಪಾರ್ಕ್ ಬೆಂಗಳೂರು ಮೊಬೈಲ್ ಸಂಖ್ಯೆ: 9632496560 ಅಥವಾ 9480806400 ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲಬುರ್ಗಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್