ನಾನಾ ಘಟಕಗಳ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ, 29 ಮೇ (ಹಿ.ಸ.) : ಆ್ಯಂಕರ್ : 2026-27 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ನಾನಾ ಘಟಕಗಳಾದ ಹೊಸ ಪ್ರದೇಶ ವಿಸ್ತರಣೆ (ಡ್ರ್ಯಾಗನ್ ಫ್ರೂಟ್, ಬಾಳೆ, ಲಿಂಬೆ), ಹೂ ಬೆಳೆ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ಈರುಳ್ಳಿ ಶೇಖರಣಾ ಘಟ
ನಾನಾ ಘಟಕಗಳ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಧಾರವಾಡ, 29 ಮೇ (ಹಿ.ಸ.) :

ಆ್ಯಂಕರ್ : 2026-27 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ನಾನಾ ಘಟಕಗಳಾದ ಹೊಸ ಪ್ರದೇಶ ವಿಸ್ತರಣೆ (ಡ್ರ್ಯಾಗನ್ ಫ್ರೂಟ್, ಬಾಳೆ, ಲಿಂಬೆ), ಹೂ ಬೆಳೆ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ಈರುಳ್ಳಿ ಶೇಖರಣಾ ಘಟಕ, ವೈಯಕ್ತಿಕ ಕೃಷಿ ಹೊಂಡ, ತಳ್ಳುಗಾಡಿ, 20 ಹೆಚ್.ಪಿ.ಗಿಂತ ಕಡಿಮೆ ಇರುವ ಟ್ರ್ಯಾಕ್ಟರ್ ಘಟಕಗಳಿಗೆ ಸಹಾಯಧನ ಪಡೆಯಲು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ರೈತರು ಜೂನ್ 15, 2026 ರೊಳಗಾಗಿ ನವಲಗುಂದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಲ್ಲಾ ಪಂಚಾಯತ್) ಕಛೇರಿಗೆ ಅರ್ಜಿ ಸಲ್ಲಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande