ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮನವಿ
ಬಳ್ಳಾರಿ, 29 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಜೂನ್ 1 ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿರುವುದನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ಕನ್ನಡ ನಾಡು ರೈತ ಸಂಘವು ನಗರದಲ್ಲಿ ಪ್ರತಿಭಟನೆ ನಡಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕನ್ನಡ ನಾ
ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮನವಿ


ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮನವಿ


ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮನವಿ


ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮನವಿ


ಬಳ್ಳಾರಿ, 29 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಜೂನ್ 1 ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿರುವುದನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ಕನ್ನಡ ನಾಡು ರೈತ ಸಂಘವು ನಗರದಲ್ಲಿ ಪ್ರತಿಭಟನೆ ನಡಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕನ್ನಡ ನಾಡು ರೈತ ಸಂಘದ ರಾಜ್ಯಾಧ್ಯಕ್ಷ ಮೆಣಸಿನ ಈಶ್ವರಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದ್ದು, ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚದೇ ಇರುವುದು, ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ತೆರೆದಿರುವ ಬಾರ್ಗಳು ಹಾಗೂ ಮದ್ಯದಂಗಡಿಗಳಿಗೆ ಪರವಾನಗಿ ನೀಡಿರುವುದು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಾಹನಗಳ ಓವರ್ ಲೋಡ್ಗಳ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಸರ್ಕಾರದ ಈ ತಪ್ಪುಗಳನ್ನು ಮುಚ್ಚಿಕೊಳ್ಳಲು ಜಿಲ್ಲಾ ಪೊಲೀಸ್ ಹೆಲ್ಮೆಟ್ ಕಡ್ಡಾಯ ಮಾಡಿರುವುದು ಜನವಿರೋಧಿ ನೀತಿಯಾಗಿದೆ. ಹೆಲ್ಮೆಟ್ ಕಡ್ಡಾಯ ಮಾಡುವ ಬದಲು ಕರ್ನಾಟಕ ಸರ್ಕಾರ ರಸ್ತೆ ಸುರಕ್ಷತೆ, ರಸ್ತೆ ದುರಸ್ತಿ ಹಾಗೂ ಭಾರಿ ವಾಹನಗಳ ನಿಯಂತ್ರಣ - ಓವರ್ ಲೋಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆರ್. ಪ್ರಹ್ಲಾದ್, ಕಣ್ಣಿ ಶಿವಮೂರ್ತಿ, ಈರಣ್ಣಗೌಡ, ವಿಜಯಕುಮಾರ್, ಕೆ. ಈಶ್ವರ್, ಶಿವಪ್ಪ ಪರಡಿ, ವಿರುಪಾಕ್ಷ ರೆಡ್ಡಿ, ಎಸ್. ರುದ್ರಾಯಸ್ವಾಮಿ, ಗೋವಿಂದಪ್ಪ, ಎಚ್. ವಸಂತ್ ಕುಮಾರ್, ಎ. ಈರಣ್ಣ, ಶಂಕರರಾವ್, ಚಂದ್ರಶೇಖರ್, ಸಿ. ರಾಜಶೇಖರ್ ಕಮ್ಮರಚೇಡ್ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande