ಸಿದ್ದರಾಮಯ್ಯ ಕೊಡುಗೆಗಳು ಇತಿಹಾಸ ಪುಟದಲ್ಲಿ ದಾಖಲು : ಎಚ್.ಕೆ.ಪಾಟೀಲ
ಬೆಂಗಳೂರು, 28 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕದ ರಾಜಕೀಯದಲ್ಲಿ ಧೀಮಂತ ನಾಯಕತ್ವ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಕೊಡುಗೆಗಳು ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಅವರ ಆಡಳಿತದಲ್ಲಿ ಕಂಡ ದೃ
Hkp post


ಬೆಂಗಳೂರು, 28 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕದ ರಾಜಕೀಯದಲ್ಲಿ ಧೀಮಂತ ನಾಯಕತ್ವ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಕೊಡುಗೆಗಳು ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಅವರ ಆಡಳಿತದಲ್ಲಿ ಕಂಡ ದೃಢ ನಿರ್ಧಾರಗಳು, ಜನಪರ ಯೋಜನೆಗಳು ಹಾಗೂ ಸಹೋದ್ಯೋಗಿಗಳಿಗೆ ನೀಡುತ್ತಿದ್ದ ಸ್ವಾತಂತ್ರ್ಯ ಮತ್ತು ಬೆಂಬಲ ಶ್ಲಾಘನೀಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ಮಾರ್ಗದರ್ಶನ ಹಾಗೂ ಸ್ನೇಹಕ್ಕೆ ಸದಾ ಆಭಾರಿಯಾಗಿರುವುದಾಗಿ ಹೇಳಿದ ಎಚ್.ಕೆ. ಪಾಟೀಲ್, ಅವರ ರಾಜಕೀಯ ಅನುಭವ ರಾಜ್ಯದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೂಡ ಅವರ ಸಕ್ರಿಯ ರಾಜಕೀಯ ಒಡನಾಟ ಮತ್ತು ಮಾರ್ಗದರ್ಶನ ರಾಜ್ಯ ಹಾಗೂ ಪಕ್ಷಕ್ಕೆ ಮುಂದುವರಿಯಲಿ ಎಂದು ಅವರು ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande