ಮಾಕಾರಹಳ್ಳಿಯಲ್ಲಿ ೨೯ನೇ ವರ್ಷದ ಶ್ರೀರಾಮಕೋಟಿ
ಮಾಕಾರಹಳ್ಳಿಯಲ್ಲಿ ೨೯ನೇ ವರ್ಷದ ಶ್ರೀರಾಮಕೋಟಿ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಕಾರಹಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ  ೨೯ನೇ ವರ್ಷದ ಶ್ರೀರಾಮಕೋಟಿ ಮಹೋತ್ಸವದಲ್ಲಿ ಸ್ವಾಮಿಯ ಕಲ್ಯಾಣೋತ್ಸವ ನಡೆದಿದ್ದು ವಿಶೇಷವಾಗಿ ಅಲಂಕರಿಸಲಾಗಿತ್ತು.


ಕೋಲಾರ, ೨೮ ಮೇ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಕಾರಹಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ೨೯ನೇ ವರ್ಷದ ಶ್ರೀರಾಮಕೋಟಿ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆದಿದ್ದು, ಆಗಮಶಾಸ್ತ ಪ್ರಕಾರ ಶ್ರೀರಾಮನಾಮಕೋಟಿ ತಾರಕ ಮಂತ್ರ ಭಜನೆ ಸಹಸ್ರಾರು ಮಂದಿ ಪಾಲ್ಗೊಳ್ಳುವ ಮೂಲಕ ಸಂಪನ್ನಗೊ0ಡಿತು.

ಮಾಕರಹಳ್ಳಿಯ ಶ್ರೀರಾಮ ಭಜನೆ ಭಕ್ತ ಮಂಡಳಿಯಿ0ದ ಮೊದಲ ದಿನ ಕಳಶ ಸ್ಥಾಪನೆ, ಅಖಂಡ್ಲ ಪ್ರತಿಷ್ಟಾಪನೆ ಜಪ ಪ್ರಾರಂಭ, ನವಗ್ರಹ ಸ್ಥಾಪನೆ, ಸೂರ್ಯ ನಮಸ್ಕಾರ, ಸಹಸ್ರನಾಮ ಅರ್ಚನೆಗಳ ಮೂಲಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ನಂತರದ ದಿನ ನಿತ್ಯಪೂಜೆ, ನಿತ್ಯಹೋಮ ನವಗ್ರಹ ಆರಾಧನೆ, ದೇವತಾಲಂಕಾರ, ಮಹಾಮಂಗಳಾರತಿ ಯೊಂದಿಗೆ ನಡೆಯಿತು.

ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಕೊನೆ ದಿನ ಅಖಂಡ್ಲ ವಿಸರ್ಜನೆ, ರಾಮಕೋಟಿ ತಾರಕಮಂತ್ರ ಸಮಾಪ್ತಿ ನಡೆದಿದ್ದು, ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು. ಸೀತಾರಾಮ ಕಲ್ಯೋಣೋತ್ಸವ, ವಸಂತೋತ್ಸವ, ಅನ್ನಸಂತರ್ಪಣೆ ನಡೆಯಲಿದ್ದು, ಗ್ರಾಮದವರಾದ ಪ್ರಧಾನ ಅರ್ಚಕ ವೇಣುಗೋಪಾಲ ಕೃಷ್ಣಮಾಚಾರ್ಯಲು, ಮಾಕಾರಹಳ್ಳಿಯ ಅರ್ಚಕ ಮೋಹನಾಚಾರ್ಯಲು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದು, ಅಲಂಕಾರ,ನಿತ್ಯಪೂಜೆ, ಹೋಮಾದಿಗಳನ್ನು ನಡೆಸಿಕೊಟ್ಟರು. ನಿತ್ಯ ಪೂಜಾ ಮತ್ತು ಹೋಮಗಳನ್ನು ಮಕಾರಹಳ್ಳಿ ಗ್ರಾಮಸ್ಥರು ನಡೆಸಿಕೊಟ್ಟಿದ್ದು, ನಿತ್ಯವೂ ಶ್ರೀರಾಮದೇವರಿಗೆ ಹೂವಿನ ಅಲಂಕಾರ ವಿಶೇಷ ಪೂಜೆ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾಕಾರಹಳ್ಳಿ ಗ್ರಾಮಸ್ಥರು ನಿರಂತರ ಭಜನೆ ನಡೆಸಿಕೊಟ್ಟರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande