ವೀರ ಸಾವರ್ಕರ್ ಹಾಗೂ ಎನ್.ಟಿ.ಆರ್ ಜಯಂತಿ ; ಪ್ರಧಾನಿ ಮೋದಿ ನಮನ
ನವದೆಹಲಿ, 28 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿಕಾರಿ ರಾಷ್ಟ್ರವಾದಿ ಚಿಂತಕ ವೀರ ಸಾವರ್ಕರ್ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಜಯಂತಿಯ ಅಂಗವಾಗಿ ಭಾವಪೂರ್ಣ ನಮನ ಸಲ್ಲಿಸಿದರು. ಸಾಮಾಜಿಕ ಜಾಲತಾಣ ಎಕ್ಸ್ನ
Pm


ನವದೆಹಲಿ, 28 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿಕಾರಿ ರಾಷ್ಟ್ರವಾದಿ ಚಿಂತಕ ವೀರ ಸಾವರ್ಕರ್ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಜಯಂತಿಯ ಅಂಗವಾಗಿ ಭಾವಪೂರ್ಣ ನಮನ ಸಲ್ಲಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಮಹಾನ್ ಕ್ರಾಂತಿಕಾರಿ ಮತ್ತು ಪ್ರಖರ ರಾಷ್ಟ್ರವಾದಿ ಚಿಂತಕ ವೀರ ಸಾವರ್ಕರ್ ಅವರಿಗೆ ಜಯಂತಿಯಂದು ಗೌರವಪೂರ್ವಕ ನಮನಗಳು. ಅವರ ಸಾಹಸ, ಪರಾಕ್ರಮ ಮತ್ತು ಬೌದ್ಧಿಕ ವ್ಯಕ್ತಿತ್ವ ದೇಶದ ಪ್ರತಿಯೊಂದು ಪೀಳಿಗೆಯನ್ನೂ ಸದಾ ಪ್ರೇರೇಪಿಸುತ್ತದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಅವರು ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದು, ಶಸ್ತ್ರ ಹಾಗೂ ಶಾಸ್ತ್ರ ಎರಡರಲ್ಲಿಯೂ ಪಾಂಡಿತ್ಯ ಹೊಂದಿದ ಕೆಲವೇ ಜನರು ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಲ್ಲರು ಎಂಬ ಸಂದೇಶವನ್ನು ಉಲ್ಲೇಖಿಸಿದ್ದಾರೆ. ವೀರ ಸಾವರ್ಕರ್ ಅವರ ದೇಶಭಕ್ತಿ, ಸಾಮಾಜಿಕ ಸುಧಾರಣೆಯ ಚಿಂತನೆ ಮತ್ತು ಧೈರ್ಯ ಸದಾ ಜನತೆಗೆ ಸ್ಫೂರ್ತಿಯಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ಮೋದಿ ಅವರು ಇದೇ ಸಂದರ್ಭದಲ್ಲಿ ಎನ್ಟಿಆರ್ ಅವರನ್ನು ಸ್ಮರಿಸಿ, “ಜನಕಲ್ಯಾಣ ಮತ್ತು ಆಡಳಿತದಲ್ಲಿ ಅವರ ಸಮರ್ಪಣೆಯನ್ನು ದೇಶ ಸದಾ ನೆನಪಿಸಿಕೊಳ್ಳುತ್ತದೆ. ಬಡವರು ಮತ್ತು ಹಿಂದುಳಿದ ವರ್ಗದ ಜನರಿಗೆ ಗೌರವಯುತ ಜೀವನ ಕಲ್ಪಿಸಲು ಅವರು ಶ್ರಮಿಸಿದರು” ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಎನ್ಟಿಆರ್ ಅವರ ಕೊಡುಗೆ ಅನನ್ಯವಾಗಿದ್ದು, ಅವರ ಅಭಿನಯ ಮತ್ತು ವ್ಯಕ್ತಿತ್ವ ಇಂದಿಗೂ ಜನಮನ ಸೆಳೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಅವರ ಆದರ್ಶಗಳು ಮತ್ತು ಕನಸುಗಳನ್ನು ಸಾಕಾರಗೊಳಿಸಲು ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande