ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ : ಪಿಸಿಎ ಚಾರಿಟಬಲ್ ಟ್ರಸ್ಟ್ ಸ್ವಚ್ಛತಾ ಕಾರ್ಯ
ಬೆಂಗಳೂರು, 28 ಮೇ (ಹಿ.ಸ.) : ಆ್ಯಂಕರ್ : ಸಮಾಜ ಸೇವೆಯ ಭಾಗವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬೆಂಬಲ ನೀಡಬೇಕೆಂಬ ಉದ್ದೇಶದಿಂದ ಪಿಸಿಎ ಚಾರಿಟಬಲ್ ಟ್ರಸ್ಟ್ ಮಹತ್ವದ ಸ್ವಚ್ಛತಾ ಕಾರ್ಯ ಕೈಗೊಂಡಿದೆ. 2026–27ನೇ ಶೈಕ್ಷಣಿಕ ವರ್ಷದ ಪುನರಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪಾಪುರ ಸರ್ಕಾರಿ ಶಾಲಾ
Cleaning


ಬೆಂಗಳೂರು, 28 ಮೇ (ಹಿ.ಸ.) :

ಆ್ಯಂಕರ್ : ಸಮಾಜ ಸೇವೆಯ ಭಾಗವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬೆಂಬಲ ನೀಡಬೇಕೆಂಬ ಉದ್ದೇಶದಿಂದ ಪಿಸಿಎ ಚಾರಿಟಬಲ್ ಟ್ರಸ್ಟ್ ಮಹತ್ವದ ಸ್ವಚ್ಛತಾ ಕಾರ್ಯ ಕೈಗೊಂಡಿದೆ.

2026–27ನೇ ಶೈಕ್ಷಣಿಕ ವರ್ಷದ ಪುನರಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪಾಪುರ ಸರ್ಕಾರಿ ಶಾಲಾ ಆವರಣದಲ್ಲಿ ಸಂಗ್ರಹವಾಗಿದ್ದ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಇಡೀ ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಶಾಲಾ ಮಕ್ಕಳಿಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಒದಗಿಸುವುದು ಈ ಕಾರ್ಯದ ಮುಖ್ಯ ಉದ್ದೇಶವಾಗಿತ್ತು ಎಂದು ಟ್ರಸ್ಟ್ ತಿಳಿಸಿದೆ.

ಟ್ರಸ್ಟ್ ಅಧ್ಯಕ್ಷರಾದ ಸೈಮನ್ ಸಿ. ಎಂ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಸ್ತಂಭಗಳಾಗಿದ್ದು, ಅವುಗಳನ್ನು ಬೆಳೆಸುವುದು ಮತ್ತು ರಕ್ಷಿಸುವುದು ಎಲ್ಲರ ಸಾಮಾಜಿಕ ಹೊಣೆಗಾರಿಕೆ ಎಂದು ಹೇಳಿದರು. “ನಮ್ಮ ಮಕ್ಕಳು ಉತ್ತಮ ಪರಿಸರದಲ್ಲಿ ಕಲಿಯಬೇಕು. ಅದಕ್ಕಾಗಿ ನಾವು ಎಲ್ಲರೂ ಕೈಜೋಡಿಸಬೇಕು” ಎಂದು ಅವರು ಹೇಳಿದರು.

ಈ ಕಾರ್ಯದಲ್ಲಿ ತಮ್ಮ ಚಾಲಕ ಪಾರ್ಥ ಸಾರಥಿ ಅವರ ಸಹಕಾರಕ್ಕೆ ವಿಶೇಷ ಧನ್ಯವಾದ ಸಲ್ಲಿಸಿದ ಸೈಮನ್ ಸಿ. ಎಂ, ಅವರು ಟ್ರಸ್ಟ್ನ ಎಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸ್ವಚ್ಛತೆ ಮತ್ತು ವಿದ್ಯಾರ್ಥಿಗಳ ಕಲಿಕಾ ಪರಿಸರವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಟ್ರಸ್ಟ್ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande