
ಕೋಲಾರ, ೨೬ ಮೇ (ಹಿ.ಸ) :
ಆ್ಯಂಕರ್ : ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಶಾಲಾರಂಭಕ್ಕೂ ಮುನ್ನವೇ ಶಾಲಾ ಶಿಕ್ಷಣ ಇಲಾಖೆಯಿಂದ ಶೇ.೮೫ ಕ್ಕೂ ಹೆಚ್ಚು ಸರಬರಾಜಾಗಿದ್ದ ಎಲ್ಲಾ ೧೦೦ಕ್ಕೂ ಹೆಚ್ಚು ಶೀರ್ಷಿಕೆಗಳ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ ಎಂದು ತಾಲ್ಲೂಕು ನೋಡಲ್ ಅಧಿಕಾರಿ ಪಿ.ಲೇಖಾ ಹಾಗೂ ಎಂ.ಬಿ.ಮ0ಜುನಾಥ್ ತಿಳಿಸಿದರು.
ಮೇ.೨೯ ರಿಂದ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪಠ್ಯ ಪುಸ್ತಕಗಳ ಸರಬರಾಜು ಗೋಡೌನ್ನಲ್ಲಿ ಶಾಲೆಗಳಿಗೆ ಪುಸ್ತಕ ಹಸ್ತಂತರಿಸಿ ಮಾತನಾಡಿದ ಅವರು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಹಾಗೂ ಪಠ್ಯಪುಸ್ತಕ ವಿತರಣೆ ಜಿಲ್ಲಾ ನೋಡಲ್ ಅಧಿಕಾರಿ ಸಮೀವುಲ್ಲ ಮಾರ್ಗದರ್ಶನದಲ್ಲಿ ಸರಬರಾಜಾಗಿದ್ದ ಎಲ್ಲಾ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದರು.
ಜಿಲ್ಲೆಯ ಸರ್ಕಾರಿ,ಅನುದಾನಿತ ಶಾಲೆಗಳಿಂದ ಸ್ಟೂಡೆಂಟ್ ಟ್ರಾö್ಯಕಿಂಗ್ ಸಿಸ್ಟಮ್(ಸ್ಯಾಟ್ಸ್) ಆಧರಿಸಿ ಇಂಡೆAಟ್ ನೀಡಲಾಗಿತ್ತು.ಖಾಸಗಿ ಶಾಲೆಗಲು ನಿಗಧಿತ ದರ ಪಾವತಿಸಿರುವಂತೆ ಪುಸ್ತಕಗಳು ಸರಬರಾಜಾಗಿದ್ದು, ಇದರಲ್ಲಿ ಶೇ.೮೫ ರಷ್ಟು ಸರಬರಾಜಾಗಿದೆ, ಉಳಿದಂತೆ ಬಾಕಿ ಇರುವ ಪುಸ್ತಕಗಳು ಸರಬರಾಜಾಗಬೇಕಾಗಿದ್ದು, ಅವುಗಳನ್ನು ತಕ್ಷಣ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ೧ರಿಂದ ೫ನೇ ತರಗತಿವರೆಗೂ ಪಠ್ಯಪುಸ್ತಕಗಳಲ್ಲಿ ಕನ್ನಡ-ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಮುದ್ರಿಸಿ ನೀಡಲಾಗಿದೆ ಎಂದು ತಿಳಿಸಿ, ಉರ್ದು ಮಾಧ್ಯಮ ಮಕ್ಕಳಿಗೆ ಉರ್ದು-ಇಂಗ್ಲೀಷ್ನಲ್ಲಿ ಮುದ್ರಿಸಿ ಸರಬರಾಜು ಮಾಡಿದ್ದು, ವಿತರಿಸಲಾಗಿದೆ ಎಂದರು.
ಪ್ರತಿ ವರ್ಷ ಶಾಲಾ ದಿನಚರಿ ಇಡೀ ೧-೧೦ನೇ ತರಗತಿಗೂ ಒಂದೇ ಇರುತ್ತಿತ್ತು. ಆದರೆ ಈ ಬಾರಿ ತರಗತಿವಾರು ಪ್ರತ್ಯೇಕ ದಿನಚರಿಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು. ಕೆಲವು ತರಗತಿಗಳ ವರ್ಕ್ ಪುಸ್ತಕಗಳು ಸೇರಿದಂತೆ ಕೆಲವು ಮಾತ್ರ ಇನ್ನೂ ಬರಬೇಕಿದ್ದು, ಅವು ಸಹಾ ಈ ವಾರದಲ್ಲೇ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಎಂ.ಬಿ.ಮ0ಜುನಾಥ್ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೂ ಬೇಡಿಕೆಗೆ ತಕ್ಕಂತೆ ಪುಸ್ತಕಗಳ ದಾಸ್ತಾನು ಮಾಡಲಾಗಿದೆ, ಯಾವುದೇ ಶಾಲೆಗೆ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು. ಶಾಲೆಗೆ ಈಗಾಗಲೇ ತಲುಪಿರುವ ಪುಸ್ತಕಗಳನ್ನು ಹಾಳಾಗದಂತೆ ಸುರಕ್ಷಿತವಾಗಿ ಸಂಗ್ರಹಿಸಿ, ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನದಂದೇ ಮಕ್ಕಳಿಗೆ ವಿತರಿಸುವಂತೆ ಕೋರಿದರು. ಈ ಬಾರಿ ಪುಸ್ತಕ ಸಾಗಾಣಿಕೆ, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗಿದೆ ಎಂದ ಅವರು, ಆಯಾ ಶಾಲೆಗಳ ಮುಖ್ಯಶಿಕ್ಷಕರ ಖಾತೆಗೆ ಸರಬರಾಜಿಗೆ ಅಗತ್ಯವಾದಂತೆ ಹಣ ಸಂದಾಯ ಮಾಡಲಾಗಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್