


ಬಳ್ಳಾರಿ, 28 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಮುಸ್ಲಿಮರ ಪವಿತ್ರವಾದ ಬಕ್ರೀದ್ ಹಬ್ಬವನ್ನು ಸಂತೋಷ ಮತ್ತು ಸಂಭ್ರಮಾಚರಣೆಯಿಂದ ಗುರುವಾರ ಆಚರಿಸಲಾಯಿತು.
ರಾಜ್ಯ ಸಭಾ ಸದಸ್ಯರಾಗಿರುವ ಡಾ. ಸಯ್ಯದ್ ನಾಸಿರ್ ಹುಸೇನ್ ಮತ್ತು ಶಾಸಕರಾಗಿರುವ ನಾರಾ ಭರತರೆಡ್ಡಿ ಅವರು ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ವಿಶೇಷ ಪ್ರಾರ್ಥನೆ (ನಮಾಜ್)ನಲ್ಲಿ ಪಾಲ್ಗೊಂಡು, ಪರಸ್ಪರ ಆಲಿಂಗನ ಮಾಡಿಕೊಂಡು, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ರಾಜ್ಯ ಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಅವರು, ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರದ ಏಳ್ಗೆ ವೃದ್ಧಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಶಾಸಕ ನಾರಾ ಭರತರೆಡ್ಡಿ ಅವರು, ನಾಡಿನಲ್ಲಿ ಮಳೆ - ಬೆಳೆ ವೃದ್ಧಿಯಾಗಿ, ಕೃಷಿ ಮತ್ತು ಕೃಷಿಕರು ಸಂತೋಷವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್