ಬಾಲಪುರಸ್ಕಾರ್ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಾಲಪುರಸ್ಕಾರ್ ಪ್ರಶಸ್ತಿಗೆ ಅರ್ಜಿ ರಾಷ್ಟ್ರೀಯ
ಬಾಲಪುರಸ್ಕಾರ್ ಪ್ರಶಸ್ತಿಗೆ ಅರ್ಜಿ ಆಹ್ವಾನ


ಕೋಲಾರ, ಮೇ ೨೮ (ಹಿ.ಸ) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಯಡಿ ಕ್ರೀಡೆ, ಸಮಾಜಸೇವೆ, ವಿಜ್ಞಾನ, ತಂತ್ರಜ್ಞಾನ, ಪರಿಸರ, ಕಲೆ, ಸಾಂಸ್ಕೃತಿಕ ಹಾಗೂ ಅನ್ವೇಷಣೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ೧೮ವರ್ಷದೊಳಗಿನ ಮಕ್ಕಳು ಪ್ರಸಕ್ತ ಸಾಲಿನ ರಾಷ್ಟಿಯ ಬಾಲಪುರಸ್ಕಾರ ಪ್ರಶಸ್ತಿಗೆ ಅರ್ಜಿಗಳನ್ನು ಜುಲೈ ೩೧ ರೊಳಗೆ https://awards.gov.in ರಲ್ಲಿ ಸಲ್ಲಿಸಬಹುದು.

ಭಾರತದ ನಾಗರೀಕರಾಗಿರಬೇಕು ಹಾಗೂ ಭಾರತದಲ್ಲಿ ವಾಸವಿರಬೇಕು. ಒಂದು ಮಗು ಒಂದು ಕ್ಷೇತ್ರದಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಹಿಂದಿನ ವರ್ಷಗಳಲ್ಲಿ ಪ್ರಶಸ್ತಿ ಪಡೆದಿರುವ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ. ಕಳೆದ ೨ವರ್ಷಗಳಲ್ಲಿ ಸಾಧನೆ ಮಾಡಿರುವ ಮಕ್ಕಳನ್ನು ಪರಿಗಣಿಸಲಾಗುವುದು. ಶೌರ್ಯ ಪ್ರಶಸ್ತಿಗೆ ೧೮ ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಸಾಹಸ ಪ್ರದರ್ಶನ ಮಾಡಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.೦೮೧೫೨-೨೨೨೭೫೩, ೨೨೩೬೬೫, ೯೬೬೩೨೯೪೪೧೫ ಯನ್ನು ಸಂಪರ್ಕಿಸಬಹುದೆ,0ದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande