


ಬಳ್ಳಾರಿ, 27 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಖಾಸಗಿ ವಿದ್ಯಾ ಸಂಸ್ಥೆಗಳ ಡೊನೇಷನ್ ಹಾವಳಿಯನ್ನು ತಪ್ಪಿಸಲು ಆಗ್ರಹಿಸಿ ಕರವೇ ಕಾವಲುಪಡೆ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕರವೇ ಕಾವಲುಪಡೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಎಚ್ ಸುರೇಶ್ ಅವರು ಹೋರಾಟದ ನೇತೃತ್ವವಹಿಸಿ, ಖಾಸಗಿ ವಿದ್ಯಾಸಂಸ್ಥೆಗಳು ಪಡೆಯುತ್ತಿರುವ ಡೊನೇಷನ್ ನಿಯಂತ್ರಿಸಬೇಕು. ಕರ್ನಾಟಕ ಸರ್ಕಾರದ ಪುಸ್ತಕ ಭಂಡಾರದಿಂದ ಮುದ್ರಣವಾಗುವ ಪಠ್ಯಪುಸ್ತಕಗಳು ಜಿಲ್ಲಾಡಳಿತ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಮಾರಾಟವಾಗಬೇಕು. ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಕನ್ನಡದಲ್ಲೇ ಪಾಠ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷರು ಎಸ್.ಎನ್. ನರಸಿಂಹರಾಜು, ಯುವ ಘಟಕದ ಜಿಲ್ಲಾಧ್ಯಕ್ಷರು ವಿ.ಎಸ್. ಸಾಗರ್ ಅಪ್ಪು, ಜಿಲ್ಲಾ ಉಪಾಧ್ಯಕ್ಷರು ಮೋಹನ್ ಶಾನ್ ಭೋಗ್, ಬಳ್ಳಾರಿ ತಾಲೂಕು ಅಧ್ಯಕ್ಷರು ಅಶೋಕ್ ಬಡಿಗೇರ್, ಮುಬಾರಕ್, ವೀರೇಶ್ ಕುಮಾರ್, ದೊಡ್ಡನಗೌಡ, ರವಿಕುಮಾರ್, ಉಮಾಮಹೇಶ್ವರ, ಕೃಷ್ಣ ನಾಯಕ್, ನೂರ ಭಾಷಾ, ನಾಗರಾಜ ಸೀನಪ್ಪ ಪವನ್, ಜಾನ್, ನಮ್ದು ಶರತ್ ಸುನಿಲ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್