ರಾಷ್ಟ್ರಪತಿ ದ್ರೌಪದಿ ಮುರ್ಮು ನಾಥುಲಾ ಭೇಟಿ
ಗ್ಯಾಂಗ್ಟಾಕ್, 27 ಮೇ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಕ್ಕಿಂ ರಾಜ್ಯದ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿದ್ದು, ಇಂದು ತಮ್ಮ ಪ್ರವಾಸದ ಎರಡನೇ ದಿನ ಭಾರತ-ಚೀನಾ ಗಡಿಯಲ್ಲಿರುವ ಮಹತ್ವದ ನಾಥುಲಾ ದಾಟಣೆಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ಸಿಕ್ಕಿಂ ಕೇಂದ್ರ ವಿಶ್ವವಿದ್ಯಾಲಯದ
President


ಗ್ಯಾಂಗ್ಟಾಕ್, 27 ಮೇ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಕ್ಕಿಂ ರಾಜ್ಯದ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿದ್ದು, ಇಂದು ತಮ್ಮ ಪ್ರವಾಸದ ಎರಡನೇ ದಿನ ಭಾರತ-ಚೀನಾ ಗಡಿಯಲ್ಲಿರುವ ಮಹತ್ವದ ನಾಥುಲಾ ದಾಟಣೆಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ಸಿಕ್ಕಿಂ ಕೇಂದ್ರ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.

ಮಂಗಳವಾರ ಸಿಕ್ಕಿಂ ತಲುಪಿದ ರಾಷ್ಟ್ರಪತಿಗಳು ಪ್ರವಾಸದ ಮೊದಲ ದಿನ ರಾಜಧಾನಿ ಗ್ಯಾಂಗ್ಟಾಕ್ ನ ಸ್ವರ್ಣ ಜಯಂತಿ ಮೈತ್ರೇಯ ಮಂಜರಿ ಆವರಣದಲ್ಲಿರುವ ಆರ್ಕಿಡೇರಿಯಂಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ನಂತರ ದೇವರಾಲಿಯಲ್ಲಿರುವ ಪ್ರಸಿದ್ಧ ನಮ್ಗ್ಯಾಲ್ ಇನ್ಸ್ಟಿಟ್ಯೂಟ್ ಆಫ್ ಟಿಬೆಟಾಲಜಿಗೂ ಭೇಟಿ ನೀಡಿದರು.

ಇಂದು ರಾಷ್ಟ್ರಪತಿಗಳು ಭಾರತ-ಚೀನಾ ಗಡಿಯಲ್ಲಿರುವ ನಾಥುಲಾ ಪಾಸ್ಗೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ಜೂನ್ 2026ರಿಂದ ಕೈಲಾಸ ಮಾನಸ ಸರೋವರ ಯಾತ್ರೆ ನಾಥುಲಾ ಮಾರ್ಗದ ಮೂಲಕ ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಕೋವಿಡ್ ಮಹಾಮಾರಿ ಬಳಿಕ ಮೊದಲ ಬಾರಿಗೆ ನಾಥುಲಾ ದಾಟಣೆಯ ಮೂಲಕ ಯಾತ್ರೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ನಾಥುಲಾ ಭೇಟಿಯ ನಂತರ ರಾಷ್ಟ್ರಪತಿಗಳು ಗ್ಯಾಂಗ್ಟಾಕ್ ನಲ್ಲಿ ನಡೆಯಲಿರುವ ಸಿಕ್ಕಿಂ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.

ಪ್ರವಾಸದ ಕೊನೆಯ ದಿನವಾದ ಮೇ 28ರಂದು ಗ್ಯಾಂಗ್ಟಾಕ್ ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿಗಳು ಸಿಕ್ಕಿಂ ಪೊಲೀಸರಿಗೆ ‘ಪ್ರೆಸಿಡೆಂಟ್ಸ್ ಪೊಲೀಸ್ ಕಲರ್’ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ. ಈ ಗೌರವ ಪಡೆಯುತ್ತಿರುವ ದೇಶದ 15ನೇ ರಾಜ್ಯವಾಗಿ ಸಿಕ್ಕಿಂ ಹೊರಹೊಮ್ಮಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande