
ನವದೆಹಲಿ, 27 ಮೇ (ಹಿ.ಸ.) :
ಆ್ಯಂಕರ್ : ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಸಂದೇಶ ಪ್ರಕಟಿಸಿರುವ ರಾಹುಲ್ ಗಾಂಧಿ, “ಆಧುನಿಕ ಭಾರತಕ್ಕೆ ಬಲವಾದ ಅಡಿಪಾಯ ಹಾಕಿದ ಪಂಡಿತ್ ಜವಾಹರಲಾಲ್ ನೆಹರು ಅವರು ತಮ್ಮ ಇಡೀ ಜೀವನವನ್ನು ಎಲ್ಲರನ್ನೂ ಒಳಗೊಂಡ, ಸಾಮರಸ್ಯ ಹಾಗೂ ಪ್ರಗತಿಪರ ಭಾರತ ನಿರ್ಮಾಣಕ್ಕೆ ಮುಡಿಪಾಗಿಟ್ಟಿದ್ದರು” ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೌಲ್ಯಗಳು, ಸಾಂವಿಧಾನಿಕ ಹಕ್ಕುಗಳು, ಸಾಮಾಜಿಕ ನ್ಯಾಯ ಹಾಗೂ ವೈಜ್ಞಾನಿಕ ಮನೋಭಾವವನ್ನು ಆಧರಿಸಿದ ನೆಹರು ಅವರ ದೂರದೃಷ್ಟಿಯ ನಾಯಕತ್ವ ದೇಶಕ್ಕೆ ಸದಾ ಮಾರ್ಗದರ್ಶಿಯಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೆಹರು ಅವರ ಆದರ್ಶಗಳು ಹಾಗೂ ರಾಷ್ಟ್ರ ನಿರ್ಮಾಣದ ಕೊಡುಗೆ ಇಂದಿನ ಯುವಪೀಳಿಗೆಗೂ ಸ್ಫೂರ್ತಿಯಾಗಿದ್ದು, ಸಮಾನತೆ ಮತ್ತು ಪ್ರಗತಿಯ ಭಾರತದ ಕನಸನ್ನು ಸಾಕಾರಗೊಳಿಸುವ ದಾರಿಯಲ್ಲಿ ಅವರ ಚಿಂತನೆಗಳು ಪ್ರಸ್ತುತವೂ ಮಹತ್ವ ಹೊಂದಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.