
ನವದೆಹಲಿ, 27 ಮೇ (ಹಿ.ಸ.) :
ಆ್ಯಂಕರ್ : ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಇಂದು ದೆಹಲಿಯ ಶಾಂತಿ ವನದಲ್ಲಿ ಗೌರವ ನಮನ ಸಲ್ಲಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ಹಾಗೂ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ನೆಹರೂ ನೀಡಿದ ಕೊಡುಗೆ ಅನನ್ಯ ಎಂದು ಬಣ್ಣಿಸಿದ್ದಾರೆ. “ಪ್ರಪಂಚದಾದ್ಯಂತದ ಯುವ ಪೀಳಿಗೆಗೆ ನೆಹರೂ ಅವರ ಚಿಂತನೆಗಳು ಮತ್ತು ದೃಷ್ಟಿಕೋಣ ಸ್ಫೂರ್ತಿಯಾಗಿವೆ” ಎಂದು ಹೇಳಿದ್ದಾರೆ.
ವಸಾಹತುಶಾಹಿ ದಾಳಿಯಿಂದ ಸಂಕಷ್ಟಕ್ಕೀಡಾಗಿದ್ದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ರೂಪಿಸುವಲ್ಲಿ ನೆಹರೂ ಮಹತ್ವದ ಪಾತ್ರ ವಹಿಸಿದರು ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ದೇಶದಲ್ಲಿ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಅಡಿಪಾಯ ಹಾಕಿದ ನಾಯಕನಾಗಿ ಅವರನ್ನು ಸ್ಮರಿಸಿದ್ದಾರೆ.
“ಇಂದಿನ ಸಮಸ್ಯೆಗಳಿಗಾಗಿ ನೆಹರೂ ಅವರನ್ನು ಟೀಕಿಸುವುದು ಕೆಲವರ ರಾಜಕೀಯ ಫ್ಯಾಷನ್ ಆಗಿದ್ದರೂ, ಇತಿಹಾಸದಲ್ಲಿ ಅವರ ನಿಜವಾದ ಕೊಡುಗೆ ಸದಾ ಉನ್ನತ ಸ್ಥಾನದಲ್ಲೇ ಉಳಿಯಲಿದೆ” ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.