ನೆಹರು ಪುಣ್ಯತಿಥಿ ; ಸಿದ್ದರಾಮಯ್ಯ ನಮನ
ಬೆಂಗಳೂರು, 27 ಮೇ (ಹಿ.ಸ.) : ಆ್ಯಂಕರ್ : ದೇಶದ ಸ್ವಾತಂತ್ರ್ಯಕ್ಕಾಗಿ ಪಂಡಿತ್ ಜವಾಹರಲಾಲ್ ನೆಹರೂರವರು ತಮ್ಮ ಬದುಕಿನ ಅಮೂಲ್ಯ 9 ವರ್ಷಗಳನ್ನು ಸೆರೆಮನೆಯಲ್ಲಿ ಕಳೆಯುವಂತಾದರೂ ಒಮ್ಮೆಯೂ ಹೋರಾಟದ ಹಾದಿಗೆ ಬೆನ್ನು ತೋರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್
Cm post


ಬೆಂಗಳೂರು, 27 ಮೇ (ಹಿ.ಸ.) :

ಆ್ಯಂಕರ್ : ದೇಶದ ಸ್ವಾತಂತ್ರ್ಯಕ್ಕಾಗಿ ಪಂಡಿತ್ ಜವಾಹರಲಾಲ್ ನೆಹರೂರವರು ತಮ್ಮ ಬದುಕಿನ ಅಮೂಲ್ಯ 9 ವರ್ಷಗಳನ್ನು ಸೆರೆಮನೆಯಲ್ಲಿ ಕಳೆಯುವಂತಾದರೂ ಒಮ್ಮೆಯೂ ಹೋರಾಟದ ಹಾದಿಗೆ ಬೆನ್ನು ತೋರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯತಿಥಿ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಗಾಂಧಿಯವರ ನಾಯಕತ್ವದಲ್ಲಿ ಭಾರತೀಯರನ್ನು ಸ್ವಾತಂತ್ರ್ಯದೆಡೆಗೆ ನಿರಂತರ ಸಂಘಟಿಸಿದ ನೆಹರೂ ಅವರು, ಅದರ ಜೊತೆಗೆ ಭಾರತದ ಭವಿಷ್ಯಕ್ಕೆ ಮಾರಕವಾಗಿದ್ದ ವರ್ಣ ವ್ಯವಸ್ಥೆ, ಕೋಮುವಾದ, ಭಾಷೆಯಾಧಾರಿತ ವೈರುಧ್ಯಗಳ ನಿವಾರಣೆಗೂ ಶಕ್ತಿಮೀರಿ ಶ್ರಮಿಸಿದ್ದರು.

ಸ್ವಾತಂತ್ರ್ಯೋತ್ತರ ಭಾರತಕ್ಕೆ ಸೈದ್ಧಾಂತಿಕ ಹಾಗೂ ರಾಜತಾಂತ್ರಿಕ ಹಾದಿ ತೋರಿದ ದಾರ್ಶನಿಕ ನೆಹರೂರವರು. ವೈಜ್ಞಾನಿಕ, ವೈಚಾರಿಕ ಮತ್ತು ಜಾತ್ಯತೀತ ಚಿಂತನೆಗಳ ನೆಲೆಯಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿದ ಮಹಾನ್ ಚೇತನ, ನೆಹರೂರವರ ಜೀವನ - ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande