
ಬಳ್ಳಾರಿ, 27 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಕೌಲ್ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಗೋಲ್ ಬೋಡಿ ಏರಿಯಾದಲ್ಲಿ ಬಕ್ರೀದ್ ಹಬ್ಬಕ್ಕೆ ವಧೆ ಮಾಡಲು ವ್ಯಕ್ತಿಯೊಬ್ಬರು ತಮ್ಮ ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ 18 ಎತ್ತು, 26 ಹೋರಿ ಕರುಗಳು ಹಾಗೂ ಒಂದು ಎಮ್ಮೆ ಕರು ಸೇರಿ ಒಟ್ಟು 45 ಜಾನುವಾರುಗಳನ್ನು ಅಕ್ರಮವಾಗಿ ಕಟ್ಟಿಹಾಕಿದ್ದನ್ನು ಪೊಲೀಸರು ಪತ್ತೆ ಮಾಡಿ, ಅವುಗಳನ್ನು ಸಂರಕ್ಷಣೆ ಮಾಡಿದ್ದಾರೆ.
ಗೋಲ್ ಬೋಡಿ ಏರಿಯಾದ ನಿವಾಸಿ ಮೊಹಮ್ಮದ್ ಶಫಿ ಅವರು ಅಕ್ರಮವಾಗಿ ಈ ಜಾನುವಾರುಗಳನ್ನು ಕಟ್ಟಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್