ಶಾಸಕ ಹಿಟ್ನಾಳ್ ಬೆಂಬಲಿಗನಿಂದ ದೌರ್ಜನ್ಯ ; ಬಿಜೆಪಿ ಕಾರ್ಯಕರ್ತ ಹಳ್ಳಿಕೇರಿಗೆ ಸ್ವಾಂತನ
ಕೊಪ್ಪಳ, 27 ಮೇ (ಹಿ.ಸ.) : ಆ್ಯಂಕರ್ : ಮಣ್ಣು ಅಕ್ರಮ ಬಯಲಿಗೆಳಿದಿದ್ದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗನಾಗಿರುವ ಜಿಪಂ ಮಾಜಿ ಸದಸ್ಯೆ ಪತಿ ಭರಮಪ್ಪ ನಗರ ಎಂಬ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ತಾಲೂಕಿನ ನೆಲೋಗಿಪುರ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತನ ಮನೆಗೆ ಕಮಲ ಪಡೆಯ ನಾಯಕರು
ಶಾಸಕ ಹಿಟ್ನಾಳ್ ಬೆಂಬಲಿಗನಿಂದ ದೌರ್ಜನ್ಯ - ಬಿಜೆಪಿ ಕಾರ್ಯಕರ್ತ  ಹಳ್ಳಿಕೇರಿಗೆ ಸ್ವಾಂತನ


ಶಾಸಕ ಹಿಟ್ನಾಳ್ ಬೆಂಬಲಿಗನಿಂದ ದೌರ್ಜನ್ಯ - ಬಿಜೆಪಿ ಕಾರ್ಯಕರ್ತ  ಹಳ್ಳಿಕೇರಿಗೆ ಸ್ವಾಂತನ


ಶಾಸಕ ಹಿಟ್ನಾಳ್ ಬೆಂಬಲಿಗನಿಂದ ದೌರ್ಜನ್ಯ - ಬಿಜೆಪಿ ಕಾರ್ಯಕರ್ತ  ಹಳ್ಳಿಕೇರಿಗೆ ಸ್ವಾಂತನ


ಶಾಸಕ ಹಿಟ್ನಾಳ್ ಬೆಂಬಲಿಗನಿಂದ ದೌರ್ಜನ್ಯ - ಬಿಜೆಪಿ ಕಾರ್ಯಕರ್ತ  ಹಳ್ಳಿಕೇರಿಗೆ ಸ್ವಾಂತನ


ಕೊಪ್ಪಳ, 27 ಮೇ (ಹಿ.ಸ.) :

ಆ್ಯಂಕರ್ : ಮಣ್ಣು ಅಕ್ರಮ ಬಯಲಿಗೆಳಿದಿದ್ದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗನಾಗಿರುವ ಜಿಪಂ ಮಾಜಿ ಸದಸ್ಯೆ ಪತಿ ಭರಮಪ್ಪ ನಗರ ಎಂಬ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ತಾಲೂಕಿನ ನೆಲೋಗಿಪುರ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತನ ಮನೆಗೆ ಕಮಲ ಪಡೆಯ ನಾಯಕರು ಹಾಗೂ ಕಾರ್ಯಕರ್ತರು ಭೇಟಿ ನೀಡಿ, ಧೈರ್ಯ ತುಂಬಿದರು.

ಕೊಪ್ಪಳ ತಾಲೂಕಿನ ನೆಲೋಗಿಪುರ ಗ್ರಾಮದ ಬಳಿಯ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿನ ಮಣ್ಣನ್ನು ಅಕ್ರಮವಾಗಿ ಎತ್ತಿ ಬೇರೆಡೆ ಸುಮಾರು 2 ಎಕರೆ ಪ್ರದೇಶದಲ್ಲಿ ಸಂಗ್ರಹಣೆ ಮಾಡಿರುವ ಗಂಭೀರ ಅಕ್ರಮವನ್ನು ಬೆಳಕಿಗೆ ತಂದಿದ್ದ ಹಿನ್ನಲೆ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಭೀಮೇಶ ಹಳ್ಳಿಕೇರಿ ಅವರಿಗೆ ಭರಮಪ್ಪ ಹಟ್ಟಿ ಜೀವ ಬೆದರಿಕೆ ಹಾಕಿದ್ದರು.

ಈ ಹಿನ್ನಲೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭೀಮೇಶ ಹಳ್ಳಿಕೇರಿಗೆ ಧೈರ್ಯ ತುಂಬಿ, ನಿಮ್ಮ ಜತೆ ನಾವಿದ್ದೇವೆ, ಎದೆಗುಂದಬೇಡಿ ಎಂದು ಧೈರ್ಯ ತುಂಬಿದರು.

ಅಲ್ಲದೆ, ಇಂತಹ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸತ್ಯವನ್ನು ಬಹಿರಂಗಪಡಿಸಿದ ಕಾರ್ಯಕರ್ತರನ್ನೇ ಬೆದರಿಸುವ ಪ್ರಯತ್ನ ಮಾಡಿದ ಪೊಲೀಸ್ ಇಲಾಖೆಯ ಕಾರ್ಯವನ್ನು ಇದೇ ವೇಳೆ ಬಿಜೆಪಿ ನಾಯಕರು ಖಂಡಿಸಿದರು.

ಈ ಪ್ರಕರಣದಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ ಹಾಗೂ ರಾಜಕೀಯ ವ್ಯಕ್ತಿಗಳ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಕ್ರಮದ ಬಗ್ಗೆ ಮಾಹಿತಿ ಮತ್ತು ಸಾಕ್ಷಿಗಳು ಇದ್ದರೂ ಕೂಡ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಪತಿಯಾದ ಭರಮಪ್ಪ ನಗರ ಅವರು ಬೆದರಿಕೆ ಹಾಕಿರುವ ವಿಚಾರ ಗಂಭೀರ ತನಿಖೆಗೆ ಒಳಪಡಬೇಕು.

ಈ ಬೆದರಿಕೆಯ ಹಿಂದೆ ಯಾರ ರಾಜಕೀಯ ಶಕ್ತಿ ಕೆಲಸ ಮಾಡುತ್ತಿದೆ...? ಯಾರ ಆಶ್ರಯದಲ್ಲಿ ಈ ದಬ್ಬಾಳಿಕೆ ನಡೆಯುತ್ತಿದೆ ಎಂಬುದು ರಾಜ್ಯದ ಜನರ ಮುಂದೆ ಬರಲೇಬೇಕು. ಸತ್ಯ ಹೇಳಿದವರಿಗೆ ರಕ್ಷಣೆ ಸಿಗದೇ, ಅಕ್ರಮ ಮಾಡಿದವರಿಗೆ ರಾಜಕೀಯ ಪ್ರಭಾವ ಮತ್ತು ಅಧಿಕಾರದ ರಕ್ಷಣೆ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಸಾಮಾನ್ಯ ಜನರು ನ್ಯಾಯದ ಮೇಲೆ ಹೇಗೆ ನಂಬಿಕೆ ಇಡಬೇಕು..?

ಒಬ್ಬ ಕಾರ್ಯಕರ್ತ ಅಕ್ರಮದ ವಿರುದ್ಧ ಧ್ವನಿ ಎತ್ತಿದರೆ ಅವನನ್ನು ಪೊಲೀಸರು ಬೆದರಿಸುವುದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಅದು ಪ್ರಜಾಪ್ರಭುತ್ವ ಮತ್ತು ಸತ್ಯದ ಧ್ವನಿಯ ಮೇಲಿನ ದಾಳಿ ಎಂದು ಬಿಜೆಪಿ ಪಕ್ಷದ ನಾಯಕರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೆ “ನೀವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ, ನಿಮ್ಮೊಂದಿಗೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ” ಎಂಬ ವಿಶ್ವಾಸವನ್ನು ಬಿಜೆಪಿ ಕಾರ್ಯಕರ್ತ ಭೀಮೇಶನಿಗೆ ಮುಖಂಡರು ನೀಡಿದರು. ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ ಸಜ್ಜನ, ಮುಖಂಡರಾದ ಮಹಾಂತೇಶ ಪಾಟೀಲ್ ಮೈನಳ್ಳಿ, ಮುಖಂಡ ಪ್ರದೀಪ ಹಿಟ್ನಾಳ್, ಗಣೇಶ್ ಹೊರತಟ್ನಾಳ, ಉಮೇಶ್ ಕುರ್ಡೇಕರ್, ಡಾ . ಸಿದ್ದಲಿಂಗಸ್ವಾಮಿ, ಅಂದಪ್ಪ ಯಲ್ಲಮ್ಮನವರ್ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande