
ಕೋಲಾರ, ೨೭ ಮೇ (ಹಿ.ಸ) :
ಆ್ಯಂಕರ್ : ಕೋಳಿ ಸಾಕಾಣಿಕೆ ರೈತರಿಗೆ ಕನಿಷ್ಠ ಸಾಕಾಣಿಕ ವೆಚ್ಚವಾಗಿ ೧೦ ರೂಪಾಯಿ ನಿಗದಿ ಮಾಡಿರುವ ರಾಜ್ಯ ಸರ್ಕಾರದ ಆದೇಶವು ಸ್ವಾಗತವೇ ಆದರೆ ಮುಂದೆ ಸ್ವಾಮಿನಾಥನ್ ಆಯೋಗದ ಪ್ರಕಾರ ಸಾಕಾಣಿಕೆ ವೆಚ್ಚ ೨೦ ರೂ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಗಟೂರು ಶ್ರೀಧರ್ ರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿ ಇವತ್ತು ನೂರಾರು ಜನರ ಕಸುಬು ಆಗಿದೆ ಸಂಘದ ಮುಖಂಡರು ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ ಕುಮಾರಸ್ವಾಮಿಯವರು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಮಾನದಂಡಗಳನ್ನು ಪರಿಗಣಿಸಬೇಕೆಂದು ಮಾಹಿತಿ ನೀಡಿದ್ದಾರೆ ಅದರಂತೆ ಸಾಕಾಣಿಕೆ ವೆಚ್ಚ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಎಂಟು ತಿಂಗಳಿAದ ಕೋಳಿ ಸಾಕಾಣಿಕೆ ದರವಾಗಿ ಕೆಜಿಗೆ ಕನಿಷ್ಠ ೨೦ ರೂ ನಿಗದಿ ಮಾಡುವಂತೆ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದು ಮಧ್ಯಂತರ ದರವಾಗಿ ೧೦ ರೂ ನಿಗದಿ ಪಡಿಸಲು ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಿದ್ದಾರೆ ಆದರೆ ಅದು ಸಾಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಕೆ ವೆಂಕಟೇಶ್, ಪಶುಸಂಗೋಪನಾ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ, ಪಶು ಭವನದ ಆಯುಕ್ತರಿಗೆ ಕುಕ್ಕಟ ಮಹಾಮಂಡಳಿ ಅಧ್ಯಕ್ಷರಿಗೆ ಆಡಳಿತಾಧಿಕಾರಿ ಕೋಳಿ ಸಾಕಾಣಿಕ ರೈತರ ಪ್ರಮುಖ ಸಮಸ್ಯೆಯಾದ ಕಂಪನಿಗಳಿ0ದ ಸಾಕಾಣಿಕ ವೆಚ್ಚವನ್ನು ಕನಿಷ್ಠ ಸಾಕಾಣಿಕ ವೆಚ್ಚ ೨೦ ರೂಪಾಯಿಗೆ ನಿಗದಿ ಮಾಡಲು ಮನವಿಯನ್ನು ಸಲ್ಲಿಸಲಾಗಿದೆ ಹಲವಾರು ಹಂತದ ಪ್ರತಿಭಟನೆಗಳನ್ನು ನಡೆಸಿ ಒತ್ತಾಯಿಸಲಾಗಿತ್ತು ಇದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಕೋಳಿ ಸಾಕಾಣಿಕ ರೈತರಿಗೆ ಸಾಲ ಸೌಲಭ್ಯ ಕೋಳಿ ಸಾಕಾಣಿಕೆ ರೈತರಿಗೆ ಸಹಾಯಧನ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಎನ್ ಶ್ರೀರಾಮ್ ಮಾತನಾಡಿ ಕೋಳಿ ಸಾಕಾಣಿಕೆ ಕೃಷಿ ಎಂದು ಪರಿಗಣಿಸಬೇಕು ಈಗಾಗಲೇ ಶಾಸಕರು ಪರಿಷತ್ ಸದಸ್ಯರು ಅಧಿವೇಶನದಲ್ಲಿ ಚರ್ಚಿಸಲು ಮನವಿ ನೀಡಲಾಗಿತ್ತು ಕೆಜಿಎಫ್ ಶಾಸಕಿ ರೂಪ ಶಶಿಧರ್ ಸದನದಲ್ಲಿ ಚರ್ಚೆ ಮಾಡಿದ್ದಾರೆ ಮುಂದೆ ಕೂಡ ಸಮಸ್ಯೆಗಳನ್ನು ಬಗೆಹರಿಸಲು ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ ವೆಂಕಟರಾಮರೆಡ್ಡಿ, ಕೋಲಾರ ತಾಲೂಕು ಅಧ್ಯಕ್ಷ ಎಸ್.ಆರ್ ವೆಂಕಟೇಶ್, ಕಾರ್ಯದರ್ಶಿ ವೆಂಕಟೇಶ್, ಪದಾಧಿಕಾರಿಗಳಾದ ರಾಜಾರೆಡ್ಡಿ, ವೇಣುಗೋಪಾಲ್, ರಮೇಶ್, ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್