ಗ್ರಾಮೀಣ ಸಂಸ್ಕೃತಿ ಮತ್ತು ಕಲೆಯನ್ನು ಸಂಗ ಸಂಸ್ಥೆಗಳು ಪೋಷಿಸುತ್ತಿವೆ
ಬಳ್ಳಾರಿ, 26 ಮೇ (ಹಿ.ಸ.) : ಆ್ಯಂಕರ್ : ಭಾರತ ಹಳ್ಳಿಗಳ ದೇಶವಾಗಿದ್ದು ಕಲೆ ಮತ್ತು ಸಂಸ್ಕøತಿಯು ಈ ನೆಲದಲ್ಲಿಯೇ ಅಡಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ತಿಳಿಸಿದ್ದಾರೆ. ಹಂದ್ಯಾಳಿನ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾ
ಗ್ರಾಮೀಣ ಸಂಸ್ಕøತಿ ಮತ್ತು ಕಲೆಯನ್ನು ಸಂಗ ಸಂಸ್ಥೆಗಳು ಪೋಷಿಸುತ್ತಿವೆ


ಗ್ರಾಮೀಣ ಸಂಸ್ಕøತಿ ಮತ್ತು ಕಲೆಯನ್ನು ಸಂಗ ಸಂಸ್ಥೆಗಳು ಪೋಷಿಸುತ್ತಿವೆ


ಗ್ರಾಮೀಣ ಸಂಸ್ಕøತಿ ಮತ್ತು ಕಲೆಯನ್ನು ಸಂಗ ಸಂಸ್ಥೆಗಳು ಪೋಷಿಸುತ್ತಿವೆ


ಗ್ರಾಮೀಣ ಸಂಸ್ಕøತಿ ಮತ್ತು ಕಲೆಯನ್ನು ಸಂಗ ಸಂಸ್ಥೆಗಳು ಪೋಷಿಸುತ್ತಿವೆ


ಬಳ್ಳಾರಿ, 26 ಮೇ (ಹಿ.ಸ.) :

ಆ್ಯಂಕರ್ : ಭಾರತ ಹಳ್ಳಿಗಳ ದೇಶವಾಗಿದ್ದು ಕಲೆ ಮತ್ತು ಸಂಸ್ಕøತಿಯು ಈ ನೆಲದಲ್ಲಿಯೇ ಅಡಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ತಿಳಿಸಿದ್ದಾರೆ.

ಹಂದ್ಯಾಳಿನ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ

ಸಂಯುಕ್ರಾಶ್ರಯದಲ್ಲಿ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದ `ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ- 2026'ರನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳ್ಳಿಯಲ್ಲಿ ಜನರ ಬದುಕಿನ ಭಾಗವಾಗಿವೆ. ಮಠ ಮಾನ್ಯಗಳಲ್ಲಿ ಪರಂಪರೆ -ಸಾಂಸ್ಕೃತಿಕ ಮನೋಭಾವಗಳ ಪೋಷಣೆ ಆಗುತ್ತದೆ. ಈ ನಿಟ್ಟಿನಲ್ಲಿ ಶ್ರೀಮಹಾದೇವ ತಾತ ಕಲಾ ಸಂಘವು ಗ್ರಾಮೀಣ ಭಾಗದಲ್ಲಿಯೇ ಕಲಾ ಪ್ರದರ್ಶನ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.

ಮರಿ ಕೊಟ್ಟೂರು ದೇಶಿಕೇಂದ್ರ ಸ್ವಾಮೀಜಿ ಅವರು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಘ - ಸಂಸ್ಥೆಗಳು ನಿರಂತರ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಶ್ರೀ ಮಹಾದೇವ ತಾತಾ ಕಲಾ ಸಂಘದ ಶ್ರಮ ಮತ್ತು ಪ್ರತಿಭೆಗಳನ್ನು ಗುರುತಿಸಿ - ಪ್ರೋತ್ಸಾಹಿಸುವ ಶೈಲಿ ವಿಭಿನ್ನೆಂದರು.

ಶ್ರೀಧರಗಡ್ಡೆಯ ಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಎ. ನಾಗೇಂದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಎಸ್.ಬಿ. ವೀರನಗೌಡ, ಗ್ರಾಮದ ಹಿರಿಯ ಮುಖಂಡರಾದ ಬರು ಘಂಟರ ಸಣ್ಣ ಪಂಪಣ್ಣ, ಭಜನೆ ಸಂಘದ ಹಿರಿಯ ಸದಸ್ಯರಾದ ಕರ್ಚೇಡು ಮಾರೆಪ್ಪ, ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್.ಕೆ.ಆರ್. ಜಿಲಾನಿ ಭಾಷ,

ಭೀಮನೇನಿ ಪ್ರಸಾದ, ಜಿ. ಲಿಂಗಪ್ಪ, ನಿರಂಜನ, ಹಳ್ಳಿಮನೆ ದೊಡ್ಡಬಸಪ್ಪ ಉಪಸ್ಥಿತರಿದ್ದರು.

ಹಂದ್ಯಾಳು ಶ್ರೀ ಮಹಾದೇವತಾತ ಕಲಾ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಹಂದ್ಯಾಳ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಕುಮಾರಿ ಸಾಯಿ ಶೃತಿ ವಂದನಾರ್ಪಣೆ ಮಾಡಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ. ಪಂಪನಗೌಡ ಬಳ್ಳಾರಿ ತಂಡದಿಂದ ಭಜನೆ, ಶ್ರೀಮತಿ ಕವಿತ.ಕೆ ಬಳ್ಳಾರಿ ತಂಡದಿಂದ ಸುಗಮ ಸಂಗೀತ, ಶ್ರೀಮತಿ ಎರೆಮ್ಮ ತಂಡದಿಂದ ರಂಗಗೀತೆ ಗಾಯನ, ಎಸ್.ಕೆ.ಆರ್. ಜಿಲಾನಿ ತಂಡದಿಂದ ಸಾಮೂಹಿಕ ನೃತ್ಯ ಮತ್ತು ಗಣೇಶ ಕುಮಾರ್ .ಬಿ ಅವರ ತಂಡದಿಂದ `ಶರಣ ಸಂಗಮ' ನಾಟಕ ಪ್ರದರ್ಶನಗೊಂಡಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande