ಮೇ ೨೯ರಂದು ನಾಗಲಾಪುರ ಮಠದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ
ಮೇ.೨೯ರಂದು ನಾಗಲಾಪುರ ಮಠದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ
ಕೋಲಾರದ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿ


ಕೋಲಾರ, ಮೇ ೨೬ (ಹಿ.ಸ) :

ಆ್ಯಂಕರ್ : ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರದಲ್ಲಿನ ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಮಠ ಹಾಗೂ ಗದ್ದುಗೆ ಲಿಂಗರಾಜೇಶ್ವರಿ ಟ್ರಸ್ಟ್ ವತಿಯಿಂದ ಮೇ.೨೯ ರಂದು ಧರ್ಮ ಜಾಗೃತಿ ಸಮಾರಂಭ ಹಾಗೂ ಜಗದ್ದುರು ರೇಣುಕಾಚಾರ್ಯರ ಜಯಂತಿ, ಬಸವ ಜಯಂತಿ ಹಾಗೂ ವೀರಭದ್ರಸ್ವಾಮಿ ವಸತಿ ನಿಲಯದ ಮೂರನೇ ವಾರ್ಷಿಕ ಮಹೋತ್ಸವವು ನಡೆಯಲಿದೆ ಎಂದು ಶ್ರೀಮದ್ ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಪ್ರತಿ ವರ್ಷದ ಪದ್ದತಿಯಂತೆ ಶ್ರೀ ನಾಗಲಾಪುರ ಮಠದ ಶ್ರೀ ಕ್ಷೇತ್ರನಾಥ ಗವಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಲೋಕಕಲ್ಯಾಣಾರ್ಥವಾಗಿ ಮೇ. ೨೯ರಂದು ಜಯಂತೋತ್ಸವಗಳು, ಹೋಮಾದಿಗಳು, ಧರ್ಮ ಜಾಗೃತಿ ಮಹೋತ್ಸವಗಳು ನಡೆಯಲಿದೆ.

ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಹೊಸಕೋಟೆ ಎಂ.ವಿ.ಜೆ. ವೈದ್ಯಕೀಯ ಆಸ್ಪತ್ರೆಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ನಾಗಲಾಪುರದಲ್ಲಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಮಹೋತ್ಸವದ ನಿಮಿತ್ತವಾಗಿ ವಿಶೇಷ ಉತ್ಸವಗಳನ್ನು ಮತ್ತು ಹಲವು ವಿವಿಧರೀತಿಯ ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಾಗಲಾಪುರ ಮಠದ ಪೀಠಾಧ್ಯಕ್ಷ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸುವ ಕಾರ್ಯಕ್ರಮದಲ್ಲಿ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀಮದ್ ನಾಗಲಾಪುರ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande