
ಕೋಲಾರ, ಮೇ ೨೬ (ಹಿ.ಸ) :
ಆ್ಯಂಕರ್ : ಮೇ ೩೧ ರಂದು ಭಾನ್ರುವಾರದಂದು ಭಗವಾನ್ ಬುದ್ದ ಹುಣ್ಣಿಮೆಯನ್ನು ವಿಜೃಂಭಣೆಯಿ0ದ ಆಯೋಜಿಸುವಂತೆ ಅಶೋಕ ದಮ್ಮ ಧೂತ ಬುದ್ದ ಸಂಘದ ವತಿಯಿಂದ ಕೆಜಿಎಫ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಬುದ್ದ ಸಂಘದ ಸಂಚಾಲಕ ಆರ್.ಪ್ರಭುರಾಂ ತಿಳಿಸಿದ್ದಾರೆ.
ಅಶೋಕ ದಮ್ಮ ಧೂತ ಬುದ್ದ ಸಂಘದ ವತಿಯಿಂದ ಕೆಜಿಎಫ್ ಗೌತಮನಗರದ ಹೆಚ್.ಎಂ.ಗ0ಗಾಧರಯ್ಯ ಸ್ಮಾರಕ ಆಧ್ಯಾತ್ಮಿಕ ಮಂದಿರದಲ್ಲಿ ಭಗವಾನ್ ಬುದ್ದರ ಹುಣ್ಣಿಮೆಯನ್ನು ಆಯೋಜಿಸಲಾಗಿದೆ.
ಬೆಂಗಳೂರು ಮಹಾಬೋಧಿ ಸಮಾಜದ ಭಂತೇಜಿ ಧಮ್ಮಚಿತ್ತ ಮಹಾತೀರ, ಕಾರ್ಯದರ್ಶಿ ಭಂತೇಜಿಜೀನವಾಸ ಬಿಕ್ಕು, ಅಶೋಕ ದಮ್ಮದತ್ತ ಬೌದ್ದ ಸಮಾಜದ ಕಾರ್ಯದರ್ಶಿ ಭಂತೇಜಿ ಖೇಮಿಂಡೋ ಅವರುಗಳ ಸಾನ್ನಿದ್ಯದಲ್ಲಿ ಹಲವಾರು ಭಂತೇಜಿಗಳು, ಉಪಾಸಕರು ಮತ್ತು ಉಪಾಸಿಕರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡುವರು.
ವೈಶಾಖ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮದಲ್ಲಿ ಸಮಸ್ತ ನಾಗರೀಕ ಬಂಧುಗಳು, ಬುದ್ದನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಬುದ್ದ ಸಂಘದ ಉಪಾಸಕ ಕೋರಿದ್ದಾರೆ.
ಮೇ ೩೧ ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಧಮ್ಮ ಪಾದ ಉತ್ಸವ ಹಾಗೂ ಬುದ್ದ ಜಯಂತಿಯ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೆಜಿಎಫ್ ಶಾಸಕ ಡಾ|| ಎಂ.ರೂಪಕಲಾ ಶಶಿಧರ್, ವಿಧಾನಪರಿಷತ್ ಸದಸ್ಯ ಡಾ. ಕೆ.ಶಿವಕುಮಾರ್ ಭಾಗವಹಿಸುವರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್