
ಕೊಪ್ಪಳ, 26 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಕುಷ್ಟಗಿ ರಸ್ತೆ, ಟಣಕನಕಲ್ ಇಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಹೋಂಡಾ ಮೋಟಾರ್ಸ್ ಪಿವಿಟಿ ಲಿಮಿಟೆಡ್ ನರಸಾಪುರ ಇವರ ವತಿಯಿಂದ ಐಟಿಐ ಪಾಸ್ ಆದ ಹಾಗೂ ಪ್ರಸ್ತುತ ಐಟಿಐ ಎರಡನೇ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿದಾರರಿಗೆ ಶಿಶಿಕ್ಷು(ಅಪ್ರೆಂಟಿಸ್ಶಿಪ್) ಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಕ್ಯಾಂಪಸ್ ಸಂದರ್ಶನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಸಕ್ತರು ತಮ್ಮ ಆಧಾರಕಾರ್ಡ, ಪೆÇೀಟೊ ವಿದ್ಯಾರ್ಹತೆಗೆ ಸಂಬಂದಿಸಿದ ಎಲ್ಲಾ ಮೂಲ ದಾಖಲಾತಿಗಳ ಜೋತೆಗೆ 2 ಸೆಟ್ ಝರಾಕ್ಷ ಪ್ರತಿಗಳೊಂದಿಗೆ ಈ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ(ಟಣಕನಕಲ್, ಕುಷ್ಟಗಿ ರಸ್ತೆ ಕೊಪ್ಪಳ) ಮೊ.ಸಂ: 9449330436, 9448813422, 9945577155, 9742532353, 9945672606 ಮತ್ತು 9964780198 ಗೆ ಸಂರ್ಕಿಸಬಹುದು ಎಂದು ಕೊಪ್ಪಳ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಜಿಲ್ಲಾ ನೂಡಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್