ಉತ್ತರ ಪ್ರದೇಶದಲ್ಲಿ ಬಸ್ ಪಲ್ಟಿ ಇನ್ಸ್ಪೆಕ್ಟರ್ ಹಾಗೂ ಕೈದಿ ಸೇರಿ ಐವರ ಸಾವು
ಸಿವಾನ್, 26 ಮೇ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಉನ್ನಾವ್ ಸಮೀಪದ ಲಖ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿವಾನ್ ಪೊಲೀಸ್ ಲೈನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಇನ್ಸ್ಪೆಕ್ಟರ್ ಹಾಗೂ ಕೈದಿ ಸೇರಿ ಐವರು ಮೃತಪಟ್ಟಿದ್ದಾರೆ. ಘಟನೆ
ಉತ್ತರ ಪ್ರದೇಶದಲ್ಲಿ ಬಸ್ ಪಲ್ಟಿ ಇನ್ಸ್ಪೆಕ್ಟರ್ ಹಾಗೂ ಕೈದಿ ಸೇರಿ ಐವರ ಸಾವು


ಸಿವಾನ್, 26 ಮೇ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಉನ್ನಾವ್ ಸಮೀಪದ ಲಖ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿವಾನ್ ಪೊಲೀಸ್ ಲೈನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಇನ್ಸ್ಪೆಕ್ಟರ್ ಹಾಗೂ ಕೈದಿ ಸೇರಿ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 15 ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಸಿವಾನ್ ಮಂಡಲ ಕಾರಾಗೃಹದಲ್ಲಿ ಬಂಧನದಲ್ಲಿದ್ದ ಕೊಲೆ ಆರೋಪಿತ ಕೈದಿ ಛತ್ತರಪಾಲ್ ಸಿಂಗ್ ತೋಮರ್ ಅವರನ್ನು ವಿಚಾರಣೆಗೆ ಹಾಜರುಪಡಿಸಲು ಪೊಲೀಸ್ ತಂಡ ಗುರುಗ್ರಾಮ್ ನ್ಯಾಯಾಲಯಕ್ಕೆ ಕರೆದೊಯ್ದಿತ್ತು. ವಿಚಾರಣೆ ಬಳಿಕ ಪೊಲೀಸ್ ತಂಡ ಡಬಲ್ ಡೆಕ್ಕರ್ ಎಸಿ ಬಸ್ನಲ್ಲಿ ಮರಳುತ್ತಿತ್ತು. ಇದೇ ವೇಳೆ ಮಂಗಳವಾರ ಬೆಳಗ್ಗೆ ಸುಮಾರು ಐದು ಗಂಟೆ ವೇಳೆಗೆ ಉನ್ನಾವ್ ಸಮೀಪದ ಎಕ್ಸ್ಪ್ರೆಸ್ವೇಯಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಮೃತಪಟ್ಟವರಲ್ಲಿ ಸಿವಾನ್ ಪೊಲೀಸ್ ಲೈನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇನ್ಸ್ಪೆಕ್ಟರ್ ರಾಮಚಂದ್ರ ರಾಮ ಹಾಗೂ ಕೈದಿ ಛತ್ತರಪಾಲ್ ಸಿಂಗ್ ತೋಮರ್ ಸೇರಿದ್ದಾರೆ. ಉಳಿದ ಮೂವರು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರು. ಚಾಲಕನಿಗೆ ನಿದ್ರೆ ಬಂದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಪಘಾತದ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಈ ಕುರಿತು ಮಾಹಿತಿ ನೀಡಿದ ಸಿವಾನ್ ಜಿಲ್ಲಾ ಪೊಲೀಸ್ ಅಧೀಕ್ಷಕ ಪೂರಣ್ ಕುಮಾರ್ ಝಾ, ಕೈದಿಯನ್ನು ಗುರುಗ್ರಾಮ್ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ಸಾಗುವ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande