
ಬೆಂಗಳೂರು, 26 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಹನ್ನೆರಡು ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನಲೆಯಲ್ಲಿ ಅವರ ಆಡಳಿತದ ಸಾಧನೆಗಳು, ಸವಾಲುಗಳು ಮತ್ತು ಸಂಘರ್ಷಗಳ ಕುರಿತಾಗಿ ಲೇಖಕ ಪ್ರಕಾಶ ಶೇಷರಾಘವಾಚಾರ್ ಅವರು ಬರೆದ ಲೇಖನಗಳನ್ನು ಒಳಗೊಂಡ “ಆತ್ಮನಿರ್ಭರ ಭಾರತ, ಬದಲಾದ ಭಾರತ” ಎಂಬ ಪುಸ್ತಕವನ್ನು ಪ್ರಕಟಿಸಲಾಗಿತ್ತು.
ಮೋದಿ ಸರ್ಕಾರದ ವಿವಿಧ ಸಕಾರಾತ್ಮಕ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದಲ್ಲಿ ನಡೆದ ಬದಲಾವಣೆಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ಈ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಈ ಸರಣಿಯ ಮುಂದುವರಿದ ಭಾಗವಾಗಿ ಇದೀಗ ಮೂರನೇ ಪುಸ್ತಕ “ವಿಕಾಸ ಪಥ” ಶೀಘ್ರದಲ್ಲೇ ಪ್ರಕಟವಾಗುತ್ತಿದೆ. ಈ ಪುಸ್ತಕದಲ್ಲಿಯೂ ಅಭಿವೃದ್ಧಿ, ಆಡಳಿತ, ಆತ್ಮನಿರ್ಭರ ಭಾರತ ಮತ್ತು ಹೊಸ ಭಾರತದ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಲೇಖನಗಳನ್ನು ಒಳಗೊಂಡ ಸರಣಿ ಪ್ರಕಟವಾಗಲಿದೆ ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.