ಅಪರಾಧ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ
ಮಂಡ್ಯ, 25 ಮೇ (ಹಿ.ಸ.) : ಆ್ಯಂಕರ್ : ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ ವಿ.ಜೆ ಅವರು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಡಿವೈಎಸ್ಪಿ, ಸಿಪಿಐ, ಪಿಐ ಹಾಗೂ ಪಿಎಸ್ಐ ಅಧಿಕಾರಿಗಳೊಂದಿಗೆ ಮಾಸಿಕ ಅಪರಾಧ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ಅಪರಾಧ ಅಂಕ
Meeting


ಮಂಡ್ಯ, 25 ಮೇ (ಹಿ.ಸ.) :

ಆ್ಯಂಕರ್ : ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ ವಿ.ಜೆ ಅವರು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಡಿವೈಎಸ್ಪಿ, ಸಿಪಿಐ, ಪಿಐ ಹಾಗೂ ಪಿಎಸ್ಐ ಅಧಿಕಾರಿಗಳೊಂದಿಗೆ ಮಾಸಿಕ ಅಪರಾಧ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಜಿಲ್ಲೆಯ ಅಪರಾಧ ಅಂಕಿಅಂಶಗಳು, ಕಾನೂನು ಸುವ್ಯವಸ್ಥೆ, ಬಾಕಿ ತನಿಖಾ ಪ್ರಕರಣಗಳ ಪ್ರಗತಿ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಉಪವಿಭಾಗಗಳ ಡಿವೈಎಸ್ಪಿಗಳು ಹಾಗೂ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ದಿನಾಂಕ 24.04.2026ರಿಂದ 24.05.2026ರವರೆಗೆ ಅಕ್ರಮ ಚಟುವಟಿಕೆಗಳ ತಡೆ, ಹೆಚ್ಚಿನ ಐಎಂವಿ ಹಾಗೂ ಲಘು ಪ್ರಕರಣಗಳ ದಾಖಲು, ಬಾಕಿ ತನಿಖಾ ಪ್ರಕರಣಗಳ ಶೀಘ್ರ ಮುಕ್ತಾಯ, ಪೊಲೀಸ್ ಐಟಿ ಪ್ರಗತಿ ಹಾಗೂ ವಿಶೇಷ ಬಂದೋಬಸ್ತ್ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಯಿತು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ತಡೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಎಸ್ಪಿ ಡಾ. ಶೋಭಾರಾಣಿ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande