ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ
ಸೇಡಂ, 25 ಮೇ (ಹಿ.ಸ.) : ಆ್ಯಂಕರ್ : ಸೇಡಂ ತಾಲೂಕಿನ ಕಾಚೂರು ಗ್ರಾಮದಲ್ಲಿ 27 ಕೋಟಿ ರೂಗಳ ವೆಚ್ಚದಲ್ಲಿ 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಶಂಕುಸ್ಥಾಪನೆ ಭೂಮಿ ಪೂಜೆ ಹಾಗೂ ಅಡಿಗಲ್ಲು ನೆರವೇರಿಸಿದರು ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಮರ
ಶಂಕುಸ್ಥಾಪನೆ


ಸೇಡಂ, 25 ಮೇ (ಹಿ.ಸ.) :

ಆ್ಯಂಕರ್ : ಸೇಡಂ ತಾಲೂಕಿನ ಕಾಚೂರು ಗ್ರಾಮದಲ್ಲಿ 27 ಕೋಟಿ ರೂಗಳ ವೆಚ್ಚದಲ್ಲಿ 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಶಂಕುಸ್ಥಾಪನೆ ಭೂಮಿ ಪೂಜೆ ಹಾಗೂ ಅಡಿಗಲ್ಲು ನೆರವೇರಿಸಿದರು

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಹಾಗೂ ರೈತಾಪಿ ವರ್ಗಕ್ಕೆ ಅನುಕೂಲಕರವಾಗಲಿದ್ದು, ಪ್ರತ್ಯೇಕ ಉಪ ಕೇಂದ್ರ ನಿರ್ಮಾಣದಿಂದ ಕಾಚೂರು ಭಾಗದ ಸುರವಾರ, ಮುಗನೂರ, ಸೋಮಪಲ್ಲಿ, ಕುಕ್ಕುಂದಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ 110/33/11 ಕೆ.ವಿ ವಿದ್ಯುತ್ ಸರಬರಾಜು ಆಗಲಿದ್ದು, ಸ್ಥಳೀಯ ವಿದ್ಯುತ್ ಪ್ರಸರಣದಿಂದ 24/7 ವಿದ್ಯುತ್ ಸರಬರಾಜು ಹಾಗೂ ರೈತರಿಗೆ ನೀರಾವರಿಗೆ ಹೆಚ್ವು ಸಹಾಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಕಾರಿಗಳು, ಮುಖಂಡರು ಹಾಗೂ ತಾಲೂಕಾಡಳಿತ ಅಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande