202ನೇ ದಿನಕ್ಕೆ ಬಲ್ಡೋಟ ತೊಲಗಿಸಿ ಹೋರಾಟ
ಕೊಪ್ಪಳ, 20 ಮೇ (ಹಿ.ಸ.) : ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ, ಕೊಪ್ಪಳ-ಭಾಗ್ಯನಗರ ರಕ್ಷಿಸಿ 202ನೇ ದಿನದ ಹೋರಾಟಕ್ಕೆ ಕೊಪ್ಪಳ ಔಷಧ ವ್ಯಾಪಾರಿಗಳ ಸಂಘದಿಂದ ಬೆಂಬಲಿಸಲಾಯಿತು. ಸಂಘದ ಅಧ್ಯಕ್ಷ ಕೊಟ್ರಪ್ಪ ಕೊರ್ಲಹಳ್ಳಿ, ಇಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಮುಷ್ಕರ ನಡ
The lives and health of the people of Koppal Bhagyanagar are important


The lives and health of the people of Koppal Bhagyanagar are important


ಕೊಪ್ಪಳ, 20 ಮೇ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ, ಕೊಪ್ಪಳ-ಭಾಗ್ಯನಗರ ರಕ್ಷಿಸಿ 202ನೇ ದಿನದ ಹೋರಾಟಕ್ಕೆ ಕೊಪ್ಪಳ ಔಷಧ ವ್ಯಾಪಾರಿಗಳ ಸಂಘದಿಂದ ಬೆಂಬಲಿಸಲಾಯಿತು.

ಸಂಘದ ಅಧ್ಯಕ್ಷ ಕೊಟ್ರಪ್ಪ ಕೊರ್ಲಹಳ್ಳಿ, ಇಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದು ಆನ್ ಲೈನ್ ಮೂಲಕ ಔಷಧ ವ್ಯಾಪಾರ ನಿಲ್ಲಿಸಿ, ನಕಲಿ ಮತ್ತು ಆರೋಗ್ಯಕ್ಕೆ ಹಾನಿ ಮಾಡುವ ಔಷಧಗಳ ಮಾರಾಟ ನಿಲ್ಲಿಸಿ, ಕಾರ್ಪೋರೇಟ್ ಏಕಸ್ವಾಮ್ಯದ ಔಷಧ ವ್ಯಾಪಾರ ನಿಲ್ಲಿಸಿ ಎನ್ನುವ ಬೇಡಿಕೆ ಪತ್ರವನ್ನು ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದೇವೆ. ಇಂದು ಸಂಪೂರ್ಣ ಔಷಧ ಅಂಗಡಿಗಳನ್ನು ಮುಚ್ಚಿ ದೇಶಾದ್ಯಂತ ಔಷಧ ವ್ಯಾಪಾರಿಗಳು ಬೀದಿಗಿಳಿದ ಭಾಗವಾಗಿ ಕೊಪ್ಪಳದಲ್ಲಿ ಕೂಡ ಪ್ರತಿಭಟನೆ ನಡೆಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕೊಪ್ಪಳ-ಭಾಗ್ಯನಗರದ ಜನರ ಭವಿಷ್ಯ ಹಾಳು ಮಾಡಲು ಮತ್ತು ಆರೋಗ್ಯ ಕಸಿದುಕೊಳ್ಳಲು ಬರುತ್ತಿರುವ ಬಲ್ಡೋಟ ಕಾರ್ಖಾನೆ ವಿರುದ್ಧ ಹೋರಾಟ ಮಾಡಬೇಕಿದೆ. ನಮ್ಮ ಔಷಧ ಕ್ಷೇತ್ರ ಮತ್ತು ಅನಾರೋಗ್ಯಕ್ಕೆ ನೇರ ಸಂಬಂಧವಿದೆ ಎಂದರು.

ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಈ ಫ್ಯಾಕ್ಟರಿ ಬೆಳೆದಂತೆ ನಗರ ಕ್ಷೀಣಿಸುತ್ತದೆ. ಭವಿಷ್ಯದಲ್ಲಿ ಇಲ್ಲಿ ನೆಲೆಯೂರಲು ಯಾರೂ ಮನಸ್ಸು ಮಾಡುವುದಿಲ್ಲ. ಜನರೇ ಇಲ್ಲದಿದ್ದರೆ ಇಲ್ಲಿ ಔಷಧಿ ಮಾತ್ರವಲ್ಲ ಯಾವ ಮಾರುಕಟ್ಟೆಯ ವಸ್ತುಗಳೂ ಮಾರಾಟ ಆಗುವುದಿಲ್ಲ. ಒಮ್ಮೆ ಜಿಂದಾಲ್ ಸುತ್ತ ತೋರಣಗಲ್ಲಿಗೆ ಭೇಟಿ ನೀಡಿ ಎಂದರು.

ಈಗಾಗಲೇ ಬಲ್ಡೋಟ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕದ ಕಂದು ಧೂಳು ನಗರದ ಪೂರ್ವ ಭಾಗಕ್ಕೆ ಮಾಲಿನ್ಯ ಮಾಡುತ್ತಿದೆ. ರಿಯಲ್ ಎಸ್ಟೇಟ್ ಸಂಪೂರ್ಣ ಕುಸಿತ ಕಂಡಿದೆ ಎಂದರು.

ಹನುಮೇಶ ಇಲ್ಲೂರ ಮಾತನಾಡಿ, ನಮ್ಮ ಸಂಘ ಈ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ರಾಜಕಾರಣಿಗಳು ಗವಿಶ್ರೀಗಳ ಆದೇಶದಂತೆ ವಿಸ್ತರಣೆ ರದ್ದುಗೊಳಿಸಿದ ಪತ್ರ ತರಬೇಕು ಎಂದು ಇಲ್ಲಿನ ಶಾಸಕರು ಮತ್ತು ಸಚಿವರಿಗೆ ಹೇಳಿ ವರ್ಷ ಕಳೆದರೂ ಅದು ಈಡೇರಿಲ್ಲ. ಇದರಿಂದ ಪ್ರಜ್ಞಾವಂತ ಜನರಿಗೆ ಆತಂಕ ಹೆಚ್ಚು ಮಾಡಿದೆ. ಜನ ಪ್ರತಿನಿದಿನಗಳು ಈಗಲಾದರೂ ವಿಳಂಬ ಮಾಡದೆ ಸರ್ಕಾರದಿಂದ ವಿಸ್ತರಣೆಯನ್ನು ತಡೆದ ಆದೇಶ ತರಬೇಕೆಂದು ಹೇಳಿದರು.

ಕಾರ್ಯದರ್ಶಿ ಸುರೇಶ ಜೈನ್, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಔಷಧ ವ್ಯಾಪಾರ ಯಾವತ್ತೂ ಏಕಸ್ವಾಮ್ಯಕ್ಕೆ ಒಳಪಡಬಾರದು. ನಿಮ್ಮ ಬೇಡಿಕೆ ಅತ್ಯಂತ ಪ್ರಾಮಾಣಿಕವಾಗಿದ್ದು, ಜನಸಾಮಾನ್ಯರು ಆರೋಗ್ಯ ಪಡೆಯಲು ಆನ್ ಲೈನ್ ಔಷಧ ವ್ಯಾಪಾರದಿಂದ ತೊಂದರೆಯಾಗುತ್ತದೆ. ಇದನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಮುಷ್ಕರ ನಡೆಯುತ್ತಿದ್ದು ವೇದಿಕೆಯಿಂದ ಬೆಂಬಲ ವ್ಯಕ್ತಪಡಿಸಿದರು.

ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಎಸ್.ಬಿ.ರಾಜೂರು, ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಸುರೇಶ, ತಾಲೂಕು ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟರ್, ಮಂಜುನಾಥ, ನಾಗರಾಜ ಬಳ್ಳಬಳ್ಳಿ, ಅಮಿತ್ ಜಾನಾ ಗಿಣಿಗೇರಿ, ಶರಣಪ್ಪ ಬಾವಿ ಬೆಟಗೇರಿ, ಗೋಪಾಲ ಕಲಾಲ ಹುಲಿಗಿ, ವೆಂಕಟೇಶ ಚೈತ್ರಾಲಿ ಇರಕಲ್ಲಗಡಾ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ಭರಮಗೌಡ ಗದ್ದಿಗೌಡ್ರ, ಕಾಶಪ್ಪ ಚಲವಾದಿ, ಶಿವಪ್ಪ ಜಲ್ಲಿ ಇನ್ನೂ ನೂರಾರು ಔಷಧಿ ವ್ಯಾಪಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande