ಕೊಪ್ಪಳ : ವಸತಿ ನಿಲಯ - ಕಟ್ಟಡ ಅವಶ್ಯ, ಮಾಲೀಕರಿಗೆ ಆಹ್ವಾನ
ಕೊಪ್ಪಳ, 20 ಮೇ (ಹಿ.ಸ.) : ಆ್ಯಂಕರ್ : ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಹೊಂದಿರುವ ಕಟ್ಟಡಗಳು ಬಾಡಿಗೆಗೆ ಅವಶ್ಯವಿದ್ದು, ಆಸಕ್ತ ಖಾಸಗಿ ಕಟ್ಟಡ ಮಾಲೀಕರಿಗೆ ಆಹ್ವಾನಿಸಲಾಗಿದ
ಕೊಪ್ಪಳ : ವಸತಿ ನಿಲಯ - ಕಟ್ಟಡ ಅವಶ್ಯ, ಮಾಲೀಕರಿಗೆ ಆಹ್ವಾನ


ಕೊಪ್ಪಳ, 20 ಮೇ (ಹಿ.ಸ.) :

ಆ್ಯಂಕರ್ : ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಹೊಂದಿರುವ ಕಟ್ಟಡಗಳು ಬಾಡಿಗೆಗೆ ಅವಶ್ಯವಿದ್ದು, ಆಸಕ್ತ ಖಾಸಗಿ ಕಟ್ಟಡ ಮಾಲೀಕರಿಗೆ ಆಹ್ವಾನಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಕೊಪ್ಪಳದಲ್ಲಿ 150 ವಿದ್ಯಾರ್ಥಿಗಳಿಗೆ ಸ್ಥಳವಕಾಶವಿರುವ 15 ಶೌಚಾಲಯ ಮತ್ತು ಸ್ನಾನ ಗೃಹಗಳಿರುವ ಹಾಗೂ ಅಗತ್ಯ ಮೂಲಭೂತ ಸೌಕರ್ಯ ಹೊಂದಿರುವ ಬಾಡಿಗೆ ಕಟ್ಟಡದ ಅವಶ್ಯವಿದ್ದು, ಆಸಕ್ತ ಖಾಸಗಿ ಕಟ್ಟಡ ಮಾಲೀಕರು ಹೊಸ.ಆರ್.ಟಿ ಓ ಕಛೇರಿ ಹತ್ತಿರವಿರುವ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಕಛೇರಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-1 ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande