ಗ್ರೇಟ್ ನಿಕೋಬಾರ್ ಯೋಜನೆ ವಿರೋಧಿಗಳನ್ನು ‘ಚೀನಾ ಪರ’ ಎಂದು ಕರೆಯುತ್ತಿರುವ ಸರ್ಕಾರ : ಜೈರಾಮ್ ರಮೇಶ್
ನವದೆಹಲಿ, 20 ಮೇ (ಹಿ.ಸ.) : ಆ್ಯಂಕರ್ : ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪರಿಸರ ಹಾಗೂ ಮಾನವೀಯ ಆತಂಕಗಳನ್ನು ವ್ಯಕ್ತಪಡಿಸುವವರನ್ನು ಕೇಂದ್ರ ಸರ್ಕಾರ ‘ಚೀನಾ ಪರ’ ಎಂದು ಬಣ್ಣಿಸಿ ವಿಷಯವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಕಾಂಗ್ರ
ಜೈರಾಮ್ ರಮೇಶ್


ನವದೆಹಲಿ, 20 ಮೇ (ಹಿ.ಸ.) :

ಆ್ಯಂಕರ್ : ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪರಿಸರ ಹಾಗೂ ಮಾನವೀಯ ಆತಂಕಗಳನ್ನು ವ್ಯಕ್ತಪಡಿಸುವವರನ್ನು ಕೇಂದ್ರ ಸರ್ಕಾರ ‘ಚೀನಾ ಪರ’ ಎಂದು ಬಣ್ಣಿಸಿ ವಿಷಯವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ನಡೆ ವಿರೋಧದ ಧ್ವನಿಗಳನ್ನು ಅಪಖ್ಯಾತಿಗೊಳಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

2020ರಲ್ಲಿ ಲಡಾಖ್ ಪ್ರದೇಶದಲ್ಲಿ ನಡೆದ ಬೆಳವಣಿಗೆಗಳ ಬಳಿಕ ಭಾರತ-ಚೀನಾ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಲ್ಲಿ ಕೆಲವು ಪ್ರದೇಶಗಳ ಸಾಂಪ್ರದಾಯಿಕ ಗಸ್ತು ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ನಿಯಮಾವಳಿಗಳಲ್ಲೂ ಬದಲಾವಣೆಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದೇ ವೇಳೆ, ಚೀನಾ ಭಾರತದ ವ್ಯಾಪಾರ ಹಿನ್ನಡೆ ಹಾಗೂ ಭದ್ರತಾ ಸವಾಲುಗಳನ್ನೂ ಅವರು ಪ್ರಸ್ತಾಪಿಸಿದರು.

ಭಾರತವು ಚೀನಾದ ಆರ್ಥಿಕ ಮತ್ತು ರಣತಂತ್ರದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದ ಅಗತ್ಯವಿದೆ. ಆದರೆ ಗ್ರೇಟ್ ನಿಕೋಬಾರ್ ಯೋಜನೆ ಮುಖ್ಯವಾಗಿ ವಾಣಿಜ್ಯ ಉದ್ದೇಶ ಹೊಂದಿದ ಯೋಜನೆಯಾಗಿದ್ದು, ಪ್ರಸ್ತಾವಿತ ಟ್ರಾನ್ಸ್ಶಿಪ್ಮೆಂಟ್ ಬಂದರಿಗೆ ಸೇನಾ ಮೂಲಸೌಕರ್ಯಗಳೊಂದಿಗೆ ನೇರ ಸಂಬಂಧವಿಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ಅಂಡಮಾನ್-ನಿಕೋಬಾರ್ ಕಮಾಂಡ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಸೇನಾ ಮೂಲಸೌಕರ್ಯ ವಿಸ್ತರಣೆಗೆ ಸಂಬಂಧಿಸಿದ ಸಲಹೆಗಳನ್ನು ಹಲವು ವರ್ಷಗಳಿಂದ ಕಡೆಗಣಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಈ ಯೋಜನೆಯ ಹಿಂದೆ ದೊಡ್ಡ ಕಾರ್ಪೊರೇಟ್ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ ಅವರು, ಯೋಜನೆಯಿಂದ ಪರಿಸರ ಹಾಗೂ ಸ್ಥಳೀಯ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ ಎಂದಿದ್ದಾರೆ. ಗ್ರೇಟ್ ನಿಕೋಬಾರ್ ಯೋಜನೆ ಪರಿಸರ ಸಮತೋಲನ ಮತ್ತು ಮಾನವೀಯ ದೃಷ್ಟಿಯಿಂದ ದೊಡ್ಡ ಮಟ್ಟದ ಅಪಾಯಗಳನ್ನು ಉಂಟುಮಾಡಬಹುದೆಂದು ಕಾಂಗ್ರೆಸ್ ಎಚ್ಚರಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande