ಆನ್ಲೈನ್ ವ್ಯಾಪಾರ ವಿರೋಧಿಸಿ ದೇಶವ್ಯಾಪಿ ಔಷಧ ಅಂಗಡಿ ಬಂದ್ ; ಮಿಶ್ರ ಪ್ರತಿಕ್ರಿಯೆ
ನವದೆಹಲಿ, 20 ಮೇ (ಹಿ.ಸ.) : ಆ್ಯಂಕರ್ : ಆನ್ಲೈನ್ ಮಾರಾಟ ಮಾಡುವ ಔಷಧಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಭಾರಿ ರಿಯಾಯಿತಿ ಮಾರಾಟವನ್ನು ತಡೆಯಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗಿಸ್ಟ್ಸ್ (ಎಐಒಸಿಡಿ) ಕರೆ ನೀಡಿದ್ದ ಒಂದು ದಿನದ ದೇಶವ್ಯಾಪಿ ಬಂ
ಆನ್ಲೈನ್ ವ್ಯಾಪಾರ ವಿರೋಧಿಸಿ ದೇಶವ್ಯಾಪಿ ಔಷಧ ಅಂಗಡಿ ಬಂದ್ ; ಮಿಶ್ರ ಪ್ರತಿಕ್ರಿಯೆ


ನವದೆಹಲಿ, 20 ಮೇ (ಹಿ.ಸ.) :

ಆ್ಯಂಕರ್ : ಆನ್ಲೈನ್ ಮಾರಾಟ ಮಾಡುವ ಔಷಧಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಭಾರಿ ರಿಯಾಯಿತಿ ಮಾರಾಟವನ್ನು ತಡೆಯಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗಿಸ್ಟ್ಸ್ (ಎಐಒಸಿಡಿ) ಕರೆ ನೀಡಿದ್ದ ಒಂದು ದಿನದ ದೇಶವ್ಯಾಪಿ ಬಂದ್ ಗೆ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಐಒಸಿಡಿ ದೇಶದಾದ್ಯಂತ ಸುಮಾರು 12.4 ಲಕ್ಷ ಔಷಧ ವ್ಯಾಪಾರಿಗಳು, ಫಾರ್ಮಾಸಿಸ್ಟ್ಗಳು ಮತ್ತು ಔಷಧ ವಿತರಕರನ್ನು ಪ್ರತಿನಿಧಿಸುತ್ತಿದೆ ಎಂದು ಹೇಳಿಕೊಂಡಿದೆ. ಸಂಘಟನೆಯ ಕರೆ ಹಿನ್ನೆಲೆಯಲ್ಲಿ ಅನೇಕ ಕಡೆ ಔಷಧ ಅಂಗಡಿಗಳು ಬಂದ್ ಆಗಿದ್ದರೆ, ಕೆಲ ನಗರಗಳಲ್ಲಿ ಸಂಘಟಿತ ಫಾರ್ಮೆಸಿ ಸರಪಳಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ-ಎನ್ಸಿಆರ್ನಲ್ಲಿ ಕೆಲವು ದೊಡ್ಡ ಫಾರ್ಮೆಸಿ ಚೈನ್ಗಳ ಅಂಗಡಿಗಳು ತೆರೆದಿದ್ದವು. ಬಂದ್ ಕುರಿತು ಪ್ರಶ್ನಿಸಿದಾಗ, ಕೆಲವು ಸಂಸ್ಥೆಗಳ ಪ್ರತಿನಿಧಿಗಳು “ನಾವು ಈ ಹೋರಾಟದ ಭಾಗವಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಎಐಒಸಿಡಿ ಮಹಾಸಚಿವ ರಾಜೀವ್ ಸಿಂಘಲ್ ಮಾತನಾಡಿ, “ದೇಶದ ಬಹುತೇಕ ಔಷಧ ಅಂಗಡಿಗಳು ಬಂದ್ ಗೆ ಬೆಂಬಲ ಸೂಚಿಸಿವೆ. ರಾಜ್ಯ ಘಟಕಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಸ್ಪತ್ರೆಗಳ ಒಳಗೆ ಕಾರ್ಯನಿರ್ವಹಿಸುವ ನರ್ಸಿಂಗ್ ಹೋಮ್ ಫಾರ್ಮೆಸಿಗಳ ಮೇಲೆ ಯಾವುದೇ ಒತ್ತಡ ಹೇರಿಲ್ಲ” ಎಂದು ತಿಳಿಸಿದರು.

ಜಿಎಸ್ಆರ್ 817 ಮತ್ತು ಜಿಎಸ್ಆರ್ 220 ಅಧಿಸೂಚನೆಗಳ ವಿರುದ್ಧ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನಿಯಮಗಳು ಆನ್ಲೈನ್ ಔಷಧ ಮಾರಾಟ ಸಂಸ್ಥೆಗಳಿಗೆ ಪರೋಕ್ಷ ಮಾನ್ಯತೆ ನೀಡುತ್ತಿವೆ ಎಂದು ಎಐಒಸಿಡಿ ಆರೋಪಿಸಿದೆ. ಸರಿಯಾದ ಭೌತಿಕ ಪರಿಶೀಲನೆ ಇಲ್ಲದೇ ಔಷಧ ಮಾರಾಟ ನಡೆಯುತ್ತಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಕಾರ್ಪೊರೇಟ್ ಬೆಂಬಲಿತ ಆನ್ಲೈನ್ ಕಂಪನಿಗಳು ಭಾರಿ ರಿಯಾಯಿತಿ ನೀಡುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಔಷಧ ವ್ಯಾಪಾರಿಗಳಿಗೆ ತೀವ್ರ ನಷ್ಟವಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande