ಕುಡತಿನಿಯ ಯುವಕ ಕಾಣೆ
ಕುಡತಿನಿ, 20 ಮೇ (ಹಿ.ಸ.) : ಆ್ಯಂಕರ್ : ದೊಡ್ಡಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಹೀರೊ ಹೋಂಡಾ ಬೈಕ್ನಲ್ಲಿ ಹೊರಟ ನಾಗೇಶ್(23) ಕಾಣೆಯಾಗಿರುವ ಕುರಿತು ಕುಡುತಿನಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರು ತಿಳಿಸಿದ್ದಾರೆ. ಶ್ರೀರಾಮರಂಗಾಪುರದಲ್ಲಿ
Nagesh, the daughter-in-law, is missing.


ಕುಡತಿನಿ, 20 ಮೇ (ಹಿ.ಸ.) :

ಆ್ಯಂಕರ್ : ದೊಡ್ಡಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಹೀರೊ ಹೋಂಡಾ ಬೈಕ್ನಲ್ಲಿ ಹೊರಟ ನಾಗೇಶ್(23) ಕಾಣೆಯಾಗಿರುವ ಕುರಿತು ಕುಡುತಿನಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರು ತಿಳಿಸಿದ್ದಾರೆ.

ಶ್ರೀರಾಮರಂಗಾಪುರದಲ್ಲಿರುವ ತನ್ನ ದೊಡ್ಡಮ್ಮನ ಮನೆಯಿಂದ ತನ್ನ ಊರಾದ ಸಿದ್ದಮ್ಮನಹಳ್ಳಿಗೆ ಹೋಗಿ ಬರುವುದಾಗಿ ಹೇಳಿ, ಬೈಕ್ ನಲ್ಲಿ ಹೊರಟಿದ್ದು, ಇದುವರೆಗೆ ಮನೆಗೆ ಮರಳಿ ಬಂದಿರುವುದಿಲ್ಲ.

ಯುವಕನ ಚಹರೆ ಮತ್ತು ಮಾಹಿತಿ : ನಾಗೇಶ್ (ತಂದೆ ವಿ. ಹನುಮಂತಪ್ಪ), ಕೂಲಿ ಕೆಲಸ. ವಾಸ: ಶ್ರೀರಾಮ ರಂಗಾಪುರ ಗ್ರಾಮ (ಕಂಪ್ಲಿ ತಾಲೂಕು), ಹಾಲಿ ವಾಸ: ಸಿದ್ದಮ್ಮನಹಳ್ಳಿ ಗ್ರಾಮ (ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ).

ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ. ಹಳದಿ ಬಣ್ಣದ ಅಂಗಿ (ಶರ್ಟ್) ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಎದೆಯ ಮೇಲೆ ‘ಸಿಸ್ಟರ್’ ಎಂದು ಇಂಗ್ಲೀಷ್ ನಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.

ಯುವಕನ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯ ಆದಲ್ಲಿ ಕುಡುತಿನಿ ಪೆÇಲೀಸ್ ಠಾಣೆಯ ಮೊ.9480803078, ತೋರಣಗಲ್ಲು ಡಿವೈಎಸ್ಪಿ ಕಚೇರಿ ಮೊ.9480803010, ಸಿ.ಪಿ.ಐ ಕುರುಗೋಡು ವೃತ್ತ ಮೊ.9480803039 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande