ಇಟಲಿ ಪ್ರಧಾನಿ ಮೆಲೋನಿ ಜೊತೆ ಮೋದಿ ಭೋಜನ
ರೋಮ್, 20 ಮೇ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ತಮ್ಮ ಆರು ದಿನಗಳ ಐದು ರಾಷ್ಟ್ರಗಳ ವಿದೇಶ ಪ್ರವಾಸದ ಅಂತಿಮ ಹಂತವಾಗಿ ಇಟಲಿಯ ರಾಜಧಾನಿ ರೋಮ್ಗೆ ಆಗಮಿಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದ್ದು, ಅವರ ಗೌರವಾರ್ಥ ಭೋಜನ ಕೂಟವನ್ನು ಆಯೋ
ಮೋದಿ ಮತ್ತು  ಮೆಲೋನಿ


ರೋಮ್, 20 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ತಮ್ಮ ಆರು ದಿನಗಳ ಐದು ರಾಷ್ಟ್ರಗಳ ವಿದೇಶ ಪ್ರವಾಸದ ಅಂತಿಮ ಹಂತವಾಗಿ ಇಟಲಿಯ ರಾಜಧಾನಿ ರೋಮ್ಗೆ ಆಗಮಿಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದ್ದು, ಅವರ ಗೌರವಾರ್ಥ ಭೋಜನ ಕೂಟವನ್ನು ಆಯೋಜಿಸಿದರು.

ರೋಮ್ಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ಮೆಲೋನಿ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ಸೇರಿ ತೆಗೆಸಿಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೆಲೋನಿ, “ನನ್ನ ಸ್ನೇಹಿತನೇ, ರೋಮ್ಗೆ ಸ್ವಾಗತ” ಎಂದು ಬರೆದುಕೊಂಡಿದ್ದಾರೆ.

ಭೋಜನ ಸಭೆಯಲ್ಲಿ ಉಭಯ ನಾಯಕರು ಭಾರತ-ಇಟಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಅನೌಪಚಾರಿಕವಾಗಿ ಗಂಭೀರ ಚರ್ಚೆ ನಡೆಸಿದರು. ಬಳಿಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ರೋಮ್ಗೆ ಆಗಮಿಸಿದ ನಂತರ ಪ್ರಧಾನಿ ಮೆಲೋನಿ ಅವರೊಂದಿಗೆ ಭೋಜನ ಸಭೆಯಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ರೋಮ್ನ ಐತಿಹಾಸಿಕ ಕೊಲೋಸಿಯಮ್ ವೀಕ್ಷಣೆ ಮಾಡಿದರು. ಭಾರತ-ಇಟಲಿ ಸ್ನೇಹ ಸಂಬಂಧಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತು ಮುಂದಿನ ಮಾತುಕತೆಯಲ್ಲಿ ಚರ್ಚೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ರೋಮ್ನಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಆತ್ಮೀಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಭಾರತೀಯ ಸಮುದಾಯ ನೀಡಿದ ಉತ್ಸಾಹಭರಿತ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ವಿದೇಶದಲ್ಲಿರುವ ಭಾರತೀಯರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಇಟಲಿಯ ಖ್ಯಾತ ಚಿತ್ರಕಾರ ಜಿಯಾಂಪೋಲೊ ಟೊಮಾಸೆಟ್ಟಿ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿ, ಕಾಶಿ ಆಧಾರಿತ ಅವರ ಕಲಾಕೃತಿಗಳನ್ನು ವೀಕ್ಷಿಸಿದರು. ಭಾರತೀಯ ಸಂಸ್ಕೃತಿಯೊಂದಿಗೆ ಟೊಮಾಸೆಟ್ಟಿ ಅವರಿಗೆ ನಾಲ್ಕು ದಶಕಗಳ ನಂಟಿದೆ ಎಂದು ಮೋದಿ ಉಲ್ಲೇಖಿಸಿದರು.

ರೋಮ್ನಲ್ಲಿ ಭಾರತೀಯ ನೃತ್ಯ ಶೈಲಿಗಳ ಪ್ರದರ್ಶನವೂ ಗಮನಸೆಳೆಯಿತು. ಇಟಲಿಯ ಕಲಾವಿದರು ಕುಚಿಪುಡಿ, ಭರತನಾಟ್ಯ ಮತ್ತು ಕಥಕ್ ಶೈಲಿಗಳ ಸಂಯೋಜನೆಯಾದ ‘ತ್ರಿಗಲಬಂದಿ’ ನೃತ್ಯ ಪ್ರದರ್ಶಿಸಿದರು. ಭಾರತೀಯ ನೃತ್ಯ ಪರಂಪರೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಆಕರ್ಷಣೆ ಪಡೆಯುತ್ತಿರುವುದು ಸಂತಸದ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande