ಕುಡತಿನಿ ವ್ಯಕ್ತಿ ಕಾಣೆ
ಬಳ್ಳಾರಿ, 20 ಮೇ (ಹಿ.ಸ.) : ಆ್ಯಂಕರ್ : ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.23 ರಂದು ರಾಜೇಶ್(32) ಕಾಣೆಯಾಗಿದ್ದು ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ವ್ಯಕ್ತಿಯ ಚಹರೆ ಮತ್ತು ವಿಳಾಸ : ರಾಜೇಶ್ (ತಂದೆ ರಾಮಚಂದ್ರಪ್ಪ), ಜಿಂದ
Missing person


ಬಳ್ಳಾರಿ, 20 ಮೇ (ಹಿ.ಸ.) :

ಆ್ಯಂಕರ್ : ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.23 ರಂದು ರಾಜೇಶ್(32) ಕಾಣೆಯಾಗಿದ್ದು ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ವ್ಯಕ್ತಿಯ ಚಹರೆ ಮತ್ತು ವಿಳಾಸ : ರಾಜೇಶ್ (ತಂದೆ ರಾಮಚಂದ್ರಪ್ಪ), ಜಿಂದಾಲ್ನಲ್ಲಿ ಕೆಲಸ, ವಾಸ: ಕುಡುತಿನಿ ಪಟ್ಟಣ, ಬಳ್ಳಾರಿ ತಾಲ್ಲೂಕು. (ಸ್ವಂತ ಊರು: ರಾಣೀಪೇಟೆ, ಹೊಸಪೇಟೆ ಟೌನ್, ವಿಜಯನಗರ ಜಿಲ್ಲೆ).

ಎತ್ತರ ಸುಮಾರು 5.2 ಅಡಿ, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ (ಎಣ್ಣೆಗೆಂಪು), ಸ್ವಲ್ಪ ಗಡ್ಡ ಬಿಟ್ಟಿರುತ್ತಾರೆ. ಮನೆ ಬಿಟ್ಟು ಹೋಗುವಾಗ ತಿಳಿ ಹಳದಿ ಬಣ್ಣದ ಟಿ-ಶರ್ಟ್ ಮತ್ತು ಡಾರ್ಕ್ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.

ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಕುಡುತಿನಿ ಪೊಲೀಸ್ ಠಾಣೆಯ ಮೊ.9480803078, ತೋರಣಗಲ್ಲು ಡಿವೈಎಸ್ಪಿ ಕಚೇರಿ ಮೊ.9480803010, ಸಿ.ಪಿ.ಐ ಕುರುಗೋಡು ವೃತ್ತ ಮೊ.9480803039 ಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande