ಇಂದಿನಿಂದ ಬ್ರಿಕ್ಸ್ ಯುವ ಉದ್ಯಮಿತ್ವ ಕಾರ್ಯ ಸಮೂಹದ ಎರಡು ದಿನ ಸಭೆ
ಇಂದೋರ್, 20 ಮೇ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶದ ಇಂದೋರ್ ನಗರದಲ್ಲಿ ಬ್ರಿಕ್ಸ್ ಯುವ ಉದ್ಯಮಿತ್ವ ಕಾರ್ಯ ಸಮೂಹದ (ಎಂಟರ್ಪ್ರೆನ್ಯೂರ್ ವರ್ಕಿಂಗ್ ಗ್ರೂಪ್-ಇಡಬ್ಲ್ಯುಜಿ) ಎರಡು ದಿನಗಳ ಸಭೆ ಇಂದಿನಿಂದ ಆರಂಭವಾಗುತ್ತಿದೆ. “ಸುದೃಢತೆ, ನವೋದ್ಯಮ, ಸಹಕಾರ ಮತ್ತು ಸ್ಥಿರತೆಯ ನಿರ್ಮಾಣ” ಎಂಬ ವಿಷಯಾಧಾರಿತ
ಬ್ರಿಕ್ಸ ಲೋಗೊ


ಇಂದೋರ್, 20 ಮೇ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ಇಂದೋರ್ ನಗರದಲ್ಲಿ ಬ್ರಿಕ್ಸ್ ಯುವ ಉದ್ಯಮಿತ್ವ ಕಾರ್ಯ ಸಮೂಹದ (ಎಂಟರ್ಪ್ರೆನ್ಯೂರ್ ವರ್ಕಿಂಗ್ ಗ್ರೂಪ್-ಇಡಬ್ಲ್ಯುಜಿ) ಎರಡು ದಿನಗಳ ಸಭೆ ಇಂದಿನಿಂದ ಆರಂಭವಾಗುತ್ತಿದೆ. “ಸುದೃಢತೆ, ನವೋದ್ಯಮ, ಸಹಕಾರ ಮತ್ತು ಸ್ಥಿರತೆಯ ನಿರ್ಮಾಣ” ಎಂಬ ವಿಷಯಾಧಾರಿತ ಈ ಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ಯುವ ಉದ್ಯಮಿಗಳು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ಕಾರ್ಯಕ್ರಮ ವಿಭಾಗವು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದೆ.

ಸಾರ್ವಜನಿಕ ಸಂಪರ್ಕಾಧಿಕಾರಿ ಮಹಿಪಾಲ್ ಅಜಯ್ ಮಾಹಿತಿ ನೀಡಿರುವಂತೆ, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ವರ್ಚುವಲ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಣಾ ನಿಖಿಲ್ ಖಡ್ಸೆ ವಹಿಸಲಿದ್ದಾರೆ.

ಇಂದೋರ್ನ ಮ್ಯಾರಿಯಟ್ ಹೋಟೆಲ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆ ಹಾಗೂ ಕೈಗಾರಿಕಾ ಘಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರದರ್ಶನಕ್ಕೆ ರಕ್ಷಣಾ ಖಡ್ಸೆ ಚಾಲನೆ ನೀಡಲಿದ್ದಾರೆ.

ಮಧ್ಯ ಪ್ರದೇಶದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವ ವಿಶ್ವಾಸ್ ಕೈಲಾಶ್ ಸಾರಂಗ್ ಹಾಗೂ ಯುವ ಕಾರ್ಯಕ್ರಮ ವಿಭಾಗದ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳು ತಮ್ಮ ದೇಶಗಳ ಉದ್ಯಮಿತ್ವ ಪರಿಸರ ವ್ಯವಸ್ಥೆ, ನವೀನ ಮಾದರಿ ಹಾಗೂ ಯುವ ಉದ್ಯಮಿತ್ವ ಉತ್ತೇಜನ ಯೋಜನೆಗಳ ಕುರಿತು ಪ್ರಸ್ತುತಪಡಿಸಲಿದ್ದಾರೆ.

ಇದಲ್ಲದೆ ಡಿಜಿಟಲ್ ನವೋದ್ಯಮ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿ, ಸಮಾವೇಶಿತ ಉದ್ಯಮಿತ್ವ, ಹಸಿರು ಉದ್ಯಮಿತ್ವ ಹಾಗೂ ಹವಾಮಾನ ಸ್ನೇಹಿ ವ್ಯಾಪಾರ ಮಾದರಿಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ.

ಇದೇ ಇಂದೋರ್ ನಗರದಲ್ಲಿ ಜೂನ್ 9 ಮತ್ತು 13ರಂದು ಬ್ರಿಕ್ಸ್ ಕೃಷಿ ಸಮೂಹದ ಸಭೆಯೂ ನಡೆಯಲಿದೆ. ಅದರ ಮುನ್ನೋಟವಾಗಿ ಬ್ರಿಕ್ಸ್ ಯುವ ಉದ್ಯಮಿತ್ವ ಕಾರ್ಯ ಸಮೂಹ ಸಭೆಯ ಆತಿಥ್ಯವನ್ನು ಇಂದೋರ್ಗೆ ನೀಡಲಾಗಿದೆ.

ಸಭೆಯ ಎರಡನೇ ದಿನವಾದ ಮೇ 21ರಂದು ಉದ್ಯಮಿತ್ವ ಸಾಮರ್ಥ್ಯ ಮತ್ತು ನಾಯಕತ್ವ ಅಭಿವೃದ್ಧಿ ಕುರಿತ ಕಾರ್ಯಾಗಾರ ನಡೆಯಲಿದೆ. ನಂತರ ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿ ತಂಡ ಕ್ರಿಸ್ಟಲ್ ಐಟಿ ಪಾರ್ಕ್ಗೆ ಭೇಟಿ ನೀಡಿ, ಮಧ್ಯ ಪ್ರದೇಶದಲ್ಲಿ ಬೆಳೆಯುತ್ತಿರುವ ಐಟಿ ಹಾಗೂ ಸ್ಟಾರ್ಟ್ಅಪ್ ಪರಿಸರದ ಬಗ್ಗೆ ಮಾಹಿತಿ ಪಡೆಯಲಿದೆ.

ಇದರೊಂದಿಗೆ ಪಿಥಂಪುರದಲ್ಲಿರುವ ಸಿಪ್ಲಾ ಲಿಮಿಟೆಡ್ ಸಂಸ್ಥೆಗೆ ಭೇಟಿ ನೀಡಲಿರುವ ಪ್ರತಿನಿಧಿಗಳು ಔಷಧ ಉತ್ಪಾದನಾ ಪ್ರಕ್ರಿಯೆಗಳು ಹಾಗೂ ಆಧುನಿಕ ಕೈಗಾರಿಕಾ ವ್ಯವಸ್ಥೆಗಳ ಕುರಿತು ಅವಲೋಕನ ನಡೆಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande