ಮಧ್ಯ ಪ್ರದೇಶದಲ್ಲಿ ಡಾ.ಮೋಹನ್ ಭಾಗವತ್ ಪ್ರವಾಸ
ಶಹಡೋಲ್, 20 ಮೇ (ಹಿ.ಸ.) : ಆ್ಯಂಕರ್ : ಸಂಘ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ಇಂದಿನಿಂದ ಮಧ್ಯ ಪ್ರದೇಶದ ಶಹಡೋಲ್ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಮೊದಲ ಬಾರಿಗೆ ಶಹಡೋಲ್ಗೆ ಆಗಮಿಸುತ್ತಿರುವ ಡ
ಮೋಹನ್ ಭಾಗವತ್


ಶಹಡೋಲ್, 20 ಮೇ (ಹಿ.ಸ.) :

ಆ್ಯಂಕರ್ : ಸಂಘ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ಇಂದಿನಿಂದ ಮಧ್ಯ ಪ್ರದೇಶದ ಶಹಡೋಲ್ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.

ಮೊದಲ ಬಾರಿಗೆ ಶಹಡೋಲ್ಗೆ ಆಗಮಿಸುತ್ತಿರುವ ಡಾ. ಭಾಗವತ್ ಅವರು ಇಂದು ರೈಲಿನ ಮೂಲಕ ಕಟ್ನಿಗೆ ತಲುಪಿ, ಬಳಿಕ ರಸ್ತೆ ಮಾರ್ಗವಾಗಿ ಶಹಡೋಲ್ಗೆ ಆಗಮಿಸಲಿದ್ದಾರೆ. ಅವರ ಪ್ರವಾಸದ ಹಿನ್ನೆಲೆ ಜಿಲ್ಲೆಯಲ್ಲಿ ಜೆಡ್ ಪ್ಲಸ್ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸುಮಾರು 350ಕ್ಕೂ ಅಧಿಕ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭದ್ರತಾ ಕಾರ್ಯಾಚರಣೆಯಲ್ಲಿ ಸಿಐಎಸ್ಎಫ್, ಸ್ಪೆಷಲ್ ಬ್ರಾಂಚ್, ಜಿಲ್ಲಾ ಪೊಲೀಸ್ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಕರೆಸಿಕೊಳ್ಳಲಾದ ಭದ್ರತಾ ಪಡೆಗಳು ಭಾಗವಹಿಸಿವೆ.

ಡಾ. ಭಾಗವತ್ ಅವರ ಪ್ರಮುಖ ಕಾರ್ಯಕ್ರಮ ಪಾಂಡವ ನಗರದಲ್ಲಿರುವ ಸರಸ್ವತಿ ಶಾಲಾ ಆವರಣದಲ್ಲಿ ನಡೆಯಲಿರುವ ಬೌದ್ಧಿಕ ಶಿಬಿರವಾಗಿದೆ. ಈ ಶಿಬಿರದಲ್ಲಿ 300ಕ್ಕೂ ಹೆಚ್ಚು ಶಿಕ್ಷಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರವಾಸದ ಅವಧಿಯಲ್ಲಿ ಅವರು ಹಲವು ಬೌದ್ಧಿಕ ಹಾಗೂ ಸಂಘಟನಾ ಸಂಬಂಧಿತ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅವರ ಆಗಮನದ ಹಿನ್ನೆಲೆಯಲ್ಲಿ ಪಾಂಡವ ನಗರ ಪ್ರದೇಶವನ್ನು ವಿಶೇಷ ಭದ್ರತಾ ವಲಯವನ್ನಾಗಿ ಘೋಷಿಸಲಾಗಿದೆ. ಶಾಲಾ ಆವರಣದಲ್ಲಿ 24 ಗಂಟೆಗಳ ಭದ್ರತೆ ಒದಗಿಸಲಾಗಿದ್ದು, 500 ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಪ್ರವೇಶಿಸುವ ಪ್ರತಿಯೊಬ್ಬರಿಗೂ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, ಸಿಸಿಟಿವಿ ನಿಗಾವ್ಯವಸ್ಥೆ ಹಾಗೂ ಬಹುಪದರ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಶಹಡೋಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮಜಿ ಶ್ರೀವಾಸ್ತವ್ ಅವರ ಪ್ರಕಾರ, ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಡಾ. ಭಾಗವತ್ ಅವರ ಈ ಭೇಟಿ ಸಂಘಟನಾ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಜಿಲ್ಲೆಯಾದ್ಯಂತ ಸ್ವಯಂಸೇವಕರು ಹಾಗೂ ಸಂಘ ಕಾರ್ಯಕರ್ತರಲ್ಲಿ ಭಾರಿ ಉತ್ಸಾಹ ಮನೆ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande