
ಧಾರವಾಡ, 20 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅಡಿಯಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಮೇ 26, 2026 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಮ್.ಬಿ.ಬಿ.ಎಸ್ ಪದವಿ ಹೊಂದಿರಬೇಕು ಹಾಗೂ ವೈದ್ಯಕೀಯ ಮಂಡಳಿ, ಎನ್.ಎಮ್.ಸಿ ಯಿಂದ ನೊಂದಣಿ ಹೊಂದಿರಬೇಕು. ಹೆಚ್.ಐ.ವಿ., ಏಡ್ಸ್ ಕಾರ್ಯಕ್ರಮದಲ್ಲಿ ಕೆಲಸದ ಅನುಭವ ಹೊಂದಿರಬೇಕು. ವೈದ್ಯಕೀಯದಲ್ಲಿ ಎಮ್.ಡಿ ಮೆಡಿಸಿನ್, ಡಿಪೆÇ್ಲಮಾ ಇನ್ ಮೆಡಿಸಿನ್ ಪಡೆದವರಿಗೆ ಆಧ್ಯತೆ ನೀಡಲಾಗುವುದು. 06 ತಿಂಗಳ ಕೆಲಸದ ಅನುಭವ, ಕ್ಲಿನಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಸಹ ಪರಿಗಣಿಸಲಾಗುತ್ತದೆ. ಕಂಪ್ಯೂಟರ್, MS OFFICE ಕಡ್ಡಾಯವಾಗಿ ಅನುಭವ ಹೊಂದಿರತಕ್ಕದ್ದು.
ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಹಾಜರಾಗಬೇಕು. ಸಂದರ್ಶನಕ್ಕೆ ಹಾಜರಾಗುವವರಿಗೆ ಯಾವುದೇ ಟಿಎ, ಡಿಎ ನೀಡಲಾಗುವುದಿಲ್ಲ. ಆಯ್ಕೆ ಪ್ರಕ್ರೀಯೆ ಕೆಎಸ್ಎಪಿಎಸ್ (KSAPS) ನಿಯಮಾನುಸಾರ ಜರುಗಿಸಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.