
ಬಳ್ಳಾರಿ, 20 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಕೌಲ್ ಬಜಾರ್ ಪೆÇಲೀಸ್ ಠಾಣಾ ವ್ಯಾಪ್ತಿಯ ಕೆ.ಆದಿತ್ಯ (13) ತಂದೆ ಕೆ. ವೆಂಕಟೇಶ್ ಕಾಣೆಯಾಗಿದ್ದು ಈ ಕುರಿತು ಪ್ರಕರಣ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ,
ಚಹರೆ ಗುರುತು : ಎತ್ತರ ಅಂದಾಜು 4.5 ಅಡಿ, ದೃಢಕಾಯ ಮೈಕಟ್ಟು, ಸಾಧಾರಣ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಬಲಕಿವಿ ಪಕ್ಕದಲ್ಲಿ ಸಣ್ಣ ಕರಿಮಚ್ಚೆ ಇರುತ್ತದೆ. ಕಾಣೆಯಾದಾಗ ಕಿತ್ತಲೆ ಬಣ್ಣದ ಟಿ-ಶರ್ಟ್ ಮತ್ತು ಹಸಿರು ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಬಾಲಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಬಳ್ಳಾರಿ ಕಂಟ್ರೋಲ್ ರೂಂ 08392-258100, ಪಿ.ಐ. ಕೌಲ್ ಬಜಾರ್ ಠಾಣೆ ಮೊ.9480803047, ಪಿ.ಎಸ್.ಐ ಮೊ.94808203085 ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕೌಲ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್