ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ : ಶಿವಾನಂದ ಪಾಟೀಲ
ಬೆಂಗಳೂರು, 02 ಮೇ (ಹಿ.ಸ.) : ಆ್ಯಂಕರ್ : ರಾಜ್ಯದ ಕೃಷಿ ಮಾರುಕಟ್ಟೆ ಸಮಿತಿಗಳ ಆಸ್ತಿಗಳನ್ನು ರಕ್ಷಿಸಿ, ಅವುಗಳನ್ನು ರೈತ ಸ್ನೇಹಿಯಾಗಿ ರೂಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ಕಾಲ ಮ
ಶಿವಾನಂದ ಪಾಟೀಲ


ಬೆಂಗಳೂರು, 02 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದ ಕೃಷಿ ಮಾರುಕಟ್ಟೆ ಸಮಿತಿಗಳ ಆಸ್ತಿಗಳನ್ನು ರಕ್ಷಿಸಿ, ಅವುಗಳನ್ನು ರೈತ ಸ್ನೇಹಿಯಾಗಿ ರೂಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ಕಾಲ ಮುಂದುವರಿದಿದ್ದ ಮೂರು ಪ್ರಮುಖ ಭೂಸ್ವಾಧೀನ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಮಹತ್ವದ ಜಯ ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಕೃಷಿ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ಭೂಮಿ ವಶಕ್ಕೆ ಪಡೆಯುವಲ್ಲಿ ಯಶಸ್ಸು ಲಭಿಸಿದೆ.

ಒಟ್ಟು 450 ಎಕರೆ ಭೂಮಿ — ಶ್ರೀಗಂಧದ ಕಾವಲು, ಗೋಳಿಮಂಗಲ ಹಾಗೂ ಕಾರಟಗಿ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಕಾನೂನು ವಿವಾದದಲ್ಲಿದ್ದ ಭೂಮಿಯನ್ನು ಕೃಷಿ ಮಾರುಕಟ್ಟೆ ಸಮಿತಿ ವಶಕ್ಕೆ ಪಡೆಯಲಾಗಿದೆ. ಈ ಭೂಮಿಗಳಿಗೆ ನೀಡಬೇಕಾದ ಸುಮಾರು 410 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ಸಮಿತಿಯ ಸ್ವಂತ ಆದಾಯದಿಂದಲೇ ಭರಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಯೋಜನೆಗಳ ವಿವರ:

ಶ್ರೀಗಂಧದ ಕಾವಲು ಹಾಗೂ ಹೇರೋಹಳ್ಳಿ (272 ಎಕರೆ): ಬೃಹತ್ ಮೆಗಾ ಮಾರುಕಟ್ಟೆ ನಿರ್ಮಾಣ, ಗೋಳಿಮಂಗಲ (42 ಎಕರೆ): ಹಣ್ಣು, ಹೂವು ಹಾಗೂ ತರಕಾರಿ ವಿಶೇಷ ಮಾರುಕಟ್ಟೆ, ಕಾರಟಗಿ, ಕೊಪ್ಪಳ (136 ಎಕರೆ): ಸುಸಜ್ಜಿತ ಅಕ್ಕಿ ತಂತ್ರಜ್ಞಾನ ಉದ್ಯಾನವನ

ಹಿಂದಿನ ಆಡಳಿತಾವಧಿಯಲ್ಲಿ ಕೃಷಿ ಮಾರುಕಟ್ಟೆ ಕಾಯ್ದೆಗೆ ತಂದ ತಿದ್ದುಪಡಿಗಳಿಂದ ಮಾರುಕಟ್ಟೆಗಳ ಕಾರ್ಯಚಟುವಟಿಕೆ ಕುಂಠಿತಗೊಂಡಿತ್ತು. ನಂತರ ಕಾನೂನು ಅಡೆತಡೆಗಳನ್ನು ನಿವಾರಿಸಿ, ಆಸ್ತಿಗಳನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಯಿತು. ಹಿರಿಯ ವಕೀಲರ ಸಮರ್ಥ ವಾದದ ಫಲವಾಗಿ ನ್ಯಾಯಾಲಯಗಳಲ್ಲಿ ಜಯ ಸಿಕ್ಕಿದೆ ಎಂದು ಅವರು ಹೇಳಿದರು.

ಈ ಯೋಜನೆಗಳು ಪೂರ್ಣಗೊಂಡ ಬಳಿಕ ಸಾವಿರಾರು ರೈತರು ಮತ್ತು ವ್ಯಾಪಾರಿಗಳಿಗೆ ಆಧುನಿಕ ಸೌಲಭ್ಯಗಳು ಲಭ್ಯವಾಗಲಿವೆ. ರೈತರ ಹಿತರಕ್ಷಣೆಗೆ ಸರ್ಕಾರದ ಬದ್ಧತೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande