
ಕೋಲಾರ, ಮೇ ೧೯ (ಹಿ.ಸ) :
ಆ್ಯಂಕರ್ : ಮಹಿಳೆಯರ ಸಬಲೀಕರಣ ಮತ್ತು ಸ್ವ-ಉದ್ಯೋಗದ ಪ್ರೋತ್ಸಾಹಕ್ಕಾಗಿ ಉದ್ಯಮಶ್ರೀ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಎಸ್.ಎಂ ಸೆಹಗಲ್ ಫೌಂಡೇಶನ್ನ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಶಿವಶರಣಪ್ಪ ಹೇಳಿದರು.
ಜಿಲ್ಲೆಯ ಮಾಲೂರು ತಾಲ್ಲೂಕಿನ ಕುಡಿಯನೂರು ಗ್ರಾಮದಲ್ಲಿ ಎಸ್.ಎಂ ಸೆಹಗಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಉದ್ಯಮಶ್ರೀ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಉದ್ಯಮಶ್ರೀ ಯೋಜನೆ ಮೂಲಕ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ಕೌಶಲ್ಯಯುತ ತರಬೇತಿ ನೀಡುವುದು. ಅರ್ಹರಿಗೆ ವಿವಿಧ ಯಂತ್ರೋಪಕರಣ ವಿತರಣೆಯ ಜೊತೆಗೆ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಕೆಲಸವನ್ನು ಈ ಯೋಜನೆ ಮೂಲಕ ಮಾಡಲಾಗುತ್ತದೆ ಎಂದರು.
ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಧಿಕಾರಿ ತುಳಸಿ ಮಾತನಾಡಿ, ಸೆಹಗಲ್ ಫೌಂಡೇಶನ್ ವತಿಯಿಂದ ಆರಂಭಿಸಿರುವ ಉದ್ಯಮಶ್ರೀ ಯೋಜನೆಯು ಮಹಿಳೆಯ ಸ್ವಾವಲಂಭಿ ಜೀವನಕ್ಕೆ ಅತ್ಯಂತ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಸ್ವಸಹಾಯ ಸಂಘದ ಸದಸ್ಯರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ ಮೂಲಕ ವಿಮಾ ವ್ಯಾಪ್ತಿಗೆ ಒಳಪಡಬೇಕು ಎಂದು ತಿಳಿಸಿದರು.
ಸೆಹಗಲ್ ಫೌಂಡೇಶನ್ ನ ಅಧಿಕಾರಿ ವಿಜಯ್ ಪುಲಿ ಮಾತನಾಡಿ, ಉದ್ಯಮಶ್ರೀ ಯೋಜನೆಯು ಮಹಿಳೆಯರ ಸರ್ವಾಂಗೀಣ ಅಭಿವೃದ್ದಿಗೆ ಮತ್ತು ಅವರ ಆರ್ಥಿಕತೆ ಅಭಿವೃದ್ದಿಗೆ ಮತ್ತಷ್ಟು ಬಲವನ್ನು ತುಂಬುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿ ಮಂಜುಳಮ್ಮ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್