
ಬೆಂಗಳೂರು, 19 ಮೇ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ (ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ) 21 ದಿನಗಳ ಕಾರ್ಯಕರ್ತರ ಪ್ರಶಿಕ್ಷಣ ಶಿಬಿರ ‘ಕಾರ್ಯಕರ್ತ ವಿಕಾಸ ವರ್ಗ-1’ ಸಮಾರೋಪ ಸಮಾರಂಭವು ಮೇ 22, 2026ರ ಶುಕ್ರವಾರ ಸಂಜೆ 5.30ಕ್ಕೆ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ನಾನಾ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತರು ಪಾಲ್ಗೊಂಡಿದ್ದು, ಸಂಘಟನಾ ಚಟುವಟಿಕೆಗಳು, ಶಾರೀರಿಕ ಹಾಗೂ ಬೌದ್ಧಿಕ ತರಬೇತಿಗಳನ್ನು ನೀಡಲಾಗಿದೆ. ಸಮಾರೋಪ ಸಮಾರಂಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳು, ತರಬೇತಿ ಪಡೆದ ಕಾರ್ಯಕರ್ತರು ಹಾಗೂ ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.