ಡೆಂಗ್ಯೂ ರೋಗ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅವಶ್ಯ : ಸಿದ್ದಪ್ಪ ಲಿಂಗದಾಳ
ಗದಗ, 19 ಮೇ (ಹಿ.ಸ.) : ಆ್ಯಂಕರ್ : ಆರೋಗ್ಯ ಇಲಾಖೆ ಜೂನ್-ಜುಲೈ-ಆಗಸ್ಟ್ 3 ತಿಂಗಳು ತೀವ್ರ ಅಭಿಯಾನ ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳ ಉತ್ಪತ್ತಿ ಆಗುತ್ತವೆ ಮನೆ ಸುತ್ತ ನೀರಿನ ತೊಟ್ಟಿ, ಕುಂಡ, ಫ್ರಿಜ್ ಟ್ರೇ, ಎಸಿ ಟ್ರೇ, ಟೈರ್ನಲ್ಲಿ ನೀರು ನಿಂತಿದೆಯಾ ನೋಡಿ : ವಾರಕ್ಕೊಮ್ಮೆ ಎಲ್ಲಾ ನೀರು ಖಾಲಿ ಮಾಡಿ
ಫೋಟೋ


ಗದಗ, 19 ಮೇ (ಹಿ.ಸ.) :

ಆ್ಯಂಕರ್ : ಆರೋಗ್ಯ ಇಲಾಖೆ ಜೂನ್-ಜುಲೈ-ಆಗಸ್ಟ್ 3 ತಿಂಗಳು ತೀವ್ರ ಅಭಿಯಾನ ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳ ಉತ್ಪತ್ತಿ ಆಗುತ್ತವೆ ಮನೆ ಸುತ್ತ ನೀರಿನ ತೊಟ್ಟಿ, ಕುಂಡ, ಫ್ರಿಜ್ ಟ್ರೇ, ಎಸಿ ಟ್ರೇ, ಟೈರ್ನಲ್ಲಿ ನೀರು ನಿಂತಿದೆಯಾ ನೋಡಿ : ವಾರಕ್ಕೊಮ್ಮೆ ಎಲ್ಲಾ ನೀರು ಖಾಲಿ ಮಾಡಿ ಉಜ್ಜಿ ತೊಳೆಯಿರಿ. ಈಡಿಸ್ ಸೊಳ್ಳೆ ಮೊಟ್ಟೆ 1 ವರ್ಷ ಬದುಕಿರುತ್ತೆ ನೀರಿನ ಟ್ಯಾಂಕ್, ಡ್ರಮ್ ಬಿಗಿಯಾಗಿ ಮುಚ್ಚಿಡಿ. ಡೆಂಘೀ ಲಕ್ಷಣ ಕಂಡ್ರೆ ತೀವ್ರ ಜ್ವರ, ತಲೆನೋವು , ಕಣ್ಣಿನ ಹಿಂದೆ ನೋವು , ಮೈ-ಕೈ ನೋವು , ಚರ್ಮದ ಮೇಲೆ ಕೆಂಪು ಗುಳ್ಳೆ ತಕ್ಷಣ: ಹತ್ತಿರದ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗೆ ಹೋಗಿ. ರಕ್ತ ಪರೀಕ್ಷೆ ಉಚಿತ. ಪ್ಲೇಟ್ಲೆಟ್ ಕೌಂಟ್ ಚೆಕ್ ಮಾಡಿಸಿಕೊಳ್ಳಿ ಡೆಂಘೀಗೆ ನಿರ್ದಿಷ್ಟ ಮಾತ್ರೆ ಇಲ್ಲ. ಪ್ಯಾರಸಿಟಮಾಲ್ ಮಾತ್ರ ತಗೋಬೇಕು. ಆಸ್ಪಿರಿನ್, ತಗೋಬಾರ್ದು - ರಕ್ತಸ್ರಾವ ಆಗುತ್ತೆ. ಇಂತಹ ಲಕ್ಷಣಗಳು ಇದ್ದರೆ ತಕ್ಷಣವೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿರಿ ಮತ್ತು ಡೆಂಗ್ಯೂ ರೋಗ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು

ಅವರು ಜಿಲ್ಲಾಢಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ತಾಲೂಕಾ ಆರೋಗ್ಯಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತ ಆಶ್ರಯಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯಲ್ಲಿ ಏರ್ಪಡಿಸಿದ್ದ ಡೆಂಗ್ಯೂ ದಿನಾಚರಣೆ ಜಾಥಾ ಕಾರ್ಯಕ್ರಮ ಚಾಲನೆ ನೀಡಿದರು.

ಅವರು ಮಾತನಾಡಿ ಡೆಂಘೀಯನ್ನು ಸೋಲಿಸುವ ಹಂತಗಳುಸೊಳ್ಳೆ ನಾಶಕ್ಕೆ ಧೂಮೀಕರಣ ಮಾಡುವುದು ಲಾರ್ವಾ ಸರ್ವೇ: ತೊಟ್ಟಿ, ಟೈರ್, ತೆಂಗಿನ ಚಿಪ್ಪಲ್ಲಿ ಲಾರ್ವಾ ಇದೆಯಾ ಅಂತ ನೋಡಿ ಅವುಗಳನ್ನು ಸ್ವಚ್ಛಗೊಳಿಸಿರಿ ಮತ್ತು ಸಂಜೆ ಪ್ರತಿಯೊಂದು ಮನೆಯಲ್ಲಿ ಬೇವಿಸೊಪ್ಪಿನ ಧೂಮಿಕರಣ ಮಾಡಿರಿ ಈಡಿಸ್ ಸೊಳ್ಳೆಯನ್ನು ನಾಶಪಡಿಸಿರಿ, ಯಾವುದೇ ಜ್ಷರದ ಸಮಸ್ಯೆ ಇರಲಿ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ರೋಗವನ್ನು ಖಚಿತ ಪಡಿಸಿಕೊಂಡು ಔಷದೋಪಚಾರವನ್ನು ಪಡೆಯಿರಿ ಎಂದು ಹೇಳಿದರು.

ಮುಖ್ಯತಿಥಿಗಳಾದ ಡಾ.ಅಕ್ಷತಾ ರವರು ಮಾತನಾಡಿ ಈಡಿಸ್ ಇಜಿಪ್ಟೈ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೋಬ್ಬರಿಗೆ ಡೆಂಗ್ಯೂ ಚಿಕುಂಗುನ್ಯ ರೋಗವು ಹರಡುತ್ತದೆ ಆದ್ದರಿಂದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಾರ್ವಾ ನಾಶಪಡಿಸುವುದರಿಂದ ರೋಗಗಳು ಹರಡದಂತೆ ತಡೆಗಟ್ಟಬಹುದು. ಆರೋಗ್ಯ ಇಲಾಖೆಯವರು ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನ ನಿಯಂತ್ರಿಸೋಣ ಹೇಳಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಮಾತನಾಡಿ ಸೊಳ್ಳೆಗಳ ನಿಯಂತ್ರಣದಿಂದ ಡೆಂಗ್ಯೂ ಚಿಕುಂಗುನ್ಯ ಮತ್ತು ಮಲೇರಿಯಾ ರೋಗಗಳನ್ನು ನಿಯಂತ್ರಣ ಮಾಡಬಹುದು. ಸೊಳ್ಳೆ ಪರದೇ, ಒಡಮಸ್ ಲೇಪನ. ಮತ್ತು ಸಂಜೆ ಪ್ರತಿಯೊಂದು ಮನೆಯಲ್ಲಿ ಬೇವಿನಸೊಪ್ಪಿನ ಧೂಮಿಕರಣ ಮಾಡುವುದು, ಗಟರದಲ್ಲಿ ಕಸಕಡ್ಡಿ ಹಾಕದೆ ನೀರು ನಿಲ್ಲದಂತೆ ಸ್ವಚ್ಛಗೊಳಿಸುವುದು. ನಿಮ್ಮ ನೀರಿನ ಪರಿಕರಗಳಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾಆರಿಗಳಾದ ಶ್ರೀಮತಿ ಹುಲಿಗೇಮ್ಮ ಮಾದರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ವೈದ್ಯಾಧಿಕಾರಿಗಳಾದ ಡಾ.ಶರ್ಮಿಳಾ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ನಿರೀಕ್ಷಣಾಧಿಕಾರಿಗಳಾದ ಮುತ್ತಪ್ಪ ಹಟ್ಟಿಮನಿ ಎಸ್.ಬಿ.ಗಡಾದ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande