




ಬಳ್ಳಾರಿ, 19 ಮೇ (ಹಿ.ಸ.) :
ಆ್ಯಂಕರ್ : ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಬಳ್ಳಾರಿಯು ಮಳೆಯ `ಎಲ್ಲೋ ಅಲರ್ಟ್'ನಲ್ಲಿದೆ. ಬಿಸಿಲ ಬೇಗೆಗೆ ಬೆಂದ ಕಾವಲಿ (ಹಂಚು)ಯಾಗಿದ್ದ ಬಳ್ಳಾರಿ ನಗರದ ಜನತೆಗೆ ಮಂಗಳವಾರ ಮಧ್ಯಾಹ್ನ ಅಚ್ಚರಿ ಎನ್ನುವಂತೆ ಒಂದೂವರೆ ತಾಸು ಭಾರಿ ಮಳೆ ಸುರಿದು, ದೊಡ್ಡ ಸದ್ದಿನ ಗುಡುಗು - ಸಿಡಿಲು ಮೂಡಿತ್ತು.
ಮಂಗಳವಾರ ಮಧ್ಯಾಹ್ನ 2.30ರ ನಂತರ ಪ್ರಾರಂಭವಾದ ಜಿಟಿ ಜಿಟಿ ಮಳೆಯು 3 ಗಂಟೆ ಸುಮಾರಿಗೆ ರಭಸದಿಂದ ಸುರಿಯತೊಡಗಿತು. ಒಂದೂವರೆ ತಾಸು ಮಳೆ ಸುರಿದು, ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ, ತಗ್ಗು ಪ್ರದೇಶಗಳಿಗೆ ನೀರು ಹರಿದವು.
ಗುಡುಗು - ಸಿಡಿಲಿನ ಆರ್ಭಟಕ್ಕೆ ಗಿಡ ಮರಗಳು ತುಂಡಾಗಿ ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ, ವಿದ್ಯುತ್ ಕಂಬಗಳು - ತಂತಿಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಶ್ರೀಕನಕ ದುರ್ಗಮ್ಮ ಗುಡಿ ಅಂಡರ್ ಬ್ರಿಡ್ಜ್ ಮತ್ತು ಸತ್ಯನಾರಾಯಣ ಪೇಟೆ ಅಂಡರ್ ಬ್ರಿಡ್ಜ್ನಲ್ಲಿ ನೀರು ನಿಂತು, ವಾಹನಗಳ ಸಾಗಾಟಕ್ಕೆ ತೊಂದರೆಯಾಗುತ್ತಿತ್ತು. ಹಲವೆಡೆ ನೀರು ರಸ್ತೆಯಲ್ಲಿ ನಿಂತಿರುವುದು ಸಾಮಾನ್ಯವಾಗಿತ್ತು.
ಮಳೆ, ಗುಡುಗು - ಸಿಡಿಲಿನಿಂದ ಪ್ರಾಣಾಪಾಯವಾದ ವರದಿಗಳು ಈ ವರೆಗೂ ವರದಿಯಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್