



ಬಳ್ಳಾರಿ, 18 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಳ್ಳಾರಿ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ `ಪ್ರತಿಭಾ ಸ್ಪರ್ಧೆಗಳು - 2026' ಕನ್ನಡ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿದವು. 80ಕ್ಕೂ ಹೆಚ್ಚು ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರತಿಭೆಗಳನ್ನು ಪ್ರದರ್ಶನ ಮಾಡಿದರು.
ವೈದ್ಯರು ಹಾಗೂ ಶಾಸ್ತ್ರೀಯ ನೃತ್ಯ ಗುರುಗಳಾದ ಡಾ. ವೀಣಾ ಅವರು ಸ್ಪರ್ಧೆಗಳನ್ನು ಉದ್ಘಾಟಿಸಿದರು. ಸಂಗೀತ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಅವರು ಮುಖ್ಯ ಅತಿಥಿಗಳಾಗಿದ್ದರು. ನೃತ್ಯ ಗುರುಗಳಾದ ಎನ್. ಜಡೇಶ್ ಅತಿಥಿಗಳಾಗಿದ್ದರು.
ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಂ. ಭದ್ರಯ್ಯ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಡಾ. ಭ್ರಮರಾಂಭ ಯಾಟೆ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಡಾ. ಗಂಗಾಧರ ಡಿ ಹಾಗೂ ಡಾ. ಗುರುಬಸಪ್ಪ ಅವರು ಸ್ಪರ್ಧೆಗಳ ನಿರೂಪಣೆಯನ್ನು ಮಾಡಿದರು. ಸಂಘದ ಪದಾಧಿಕಾರಿಗಳಾದ ಕಂಪ್ಲಿ ದೊಡ್ಡಬಸಪ್ಪ, ಬಸವರಾಜ ಬಿಸಲಹಳ್ಳಿ, ಆರ್.ಹೆಚ್.ಎಂ. ಚನ್ನಬಸವಸ್ವಾಮಿ, ಪ್ರಕಾಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸ್ಪರ್ಧೆಗಳ ವಿಜೇತರ ವಿವರಗಳು :
ನೃತ್ಯ (ಸೋಲೋ) - ಕಿರಿಯರು
ಪ್ರಥಮ: ದೀಕ್ಷಾ ಎಲ್ಲಿಗೆರೆ - 13 ವರ್ಷ - ಬಳ್ಳಾರಿ ನಗರ
ದ್ವಿತೀಯ: ಶಿವಪ್ರಿಯ ಎಚ್.ಎಂ - 9 ವರ್ಷ - ಕುರುಗೋಡು
ಸಮಾಧಾನಕರ ಬಹುಮಾನಗಳು:
ಎಸ್.ಎಂ. ಸಾನ್ವಿ - 8 ವರ್ಷ - ಬಳ್ಳಾರಿ ಗ್ರಾಮೀಣ
ಕೆ.ಎಂ. ಪ್ರತಿಭಾ - 12 ವರ್ಷ - ಕುರುಗೋಡು
ಜಿ. ಸಂಜನಾ - 14 ವರ್ಷ - ಬಳ್ಳಾರಿ ನಗರ
ಗಾಯನ (ಸೋಲೋ) - ಹಿರಿಯರು
ಪ್ರಥಮ: ವನಿತಾ ವಿ. ಗೊಂಡಿ - 32 ವರ್ಷ - ಬಳ್ಳಾರಿ ನಗರ
ದ್ವಿತೀಯ: ಸೋಮನಾಥ - 52 ವರ್ಷ - ಬಳ್ಳಾರಿ ನಗರ
ಸಮಾಧಾನಕರ ಬಹುಮಾನ:
ವಾತ್ಸಲ್ಯ ಬಿ.ಎಂ - 17 ವರ್ಷ - ಬಳ್ಳಾರಿ ನಗರ
ಗಾಯನ (ಸೋಲೋ) - ಕಿರಿಯರು
ಪ್ರಥಮ: ವಿಶ್ವನಾಥ ಸ್ವಾಮಿ ಎಂ - 10 ವರ್ಷ - ಬಳ್ಳಾರಿ ನಗರ
ದ್ವಿತೀಯ: ಸಿದ್ದಾರ್ಥ ಸಾಲಿಮಠ - 11 ವರ್ಷ - ಬಳ್ಳಾರಿ ನಗರ
ಸಮಾಧಾನಕರ ಬಹುಮಾನ:
ಡಿ. ಸುರಭಿ ರೆಡ್ಡಿ - 8 ವರ್ಷ - ಕಂಪ್ಲಿ
ಚಿತ್ರಕಲೆ - ಹಿರಿಯರು
ಪ್ರಥಮ: ಆರ್. ತಿಪ್ಪೇಸ್ವಾಮಿ - 49 ವರ್ಷ - ಬಳ್ಳಾರಿ ನಗರ
ದ್ವಿತೀಯ: ಲಕ್ಷ್ಮೀ ಬಸವನ ಗೌಡ - 18 ವರ್ಷ - ಬಳ್ಳಾರಿ ಗ್ರಾಮೀಣ
ಸಮಾಧಾನಕರ ಬಹುಮಾನಗಳು:
ಜಂಗಮ ವಿನೋದ್ ಕುಮಾರ್ - 16 ವರ್ಷ - ಸಿರುಗುಪ್ಪ
ಅಪೂರ್ವ ಬಿ - 17 ವರ್ಷ - ಬಳ್ಳಾರಿ ನಗರ
ಚಿತ್ರಕಲೆ - ಕಿರಿಯರು
ಪ್ರಥಮ: ಸಿ.ಕೆ. ಬೃಂದಾ - 13 ವರ್ಷ - ಬಳ್ಳಾರಿ ನಗರ
ದ್ವಿತೀಯ: ಎಚ್.ಎಂ. ಮೈತ್ರಿ - 15 ವರ್ಷ - ಬಳ್ಳಾರಿ ಗ್ರಾಮೀಣ
ಸಮಾಧಾನಕರ ಬಹುಮಾನಗಳು:
ಸಿ.ಕೆ. ಕೀರ್ತಿ - 12 ವರ್ಷ - ಬಳ್ಳಾರಿ ನಗರ
ಬಿ.ಎಂ. ಸನ್ನಿಧಿ ಗೌಡ - 14 ವರ್ಷ - ಬಳ್ಳಾರಿ ನಗರ
ವೈಭವ್ ಎನ್.ಎಸ್.ಎಂ - 12 ವರ್ಷ - ಬಳ್ಳಾರಿ ನಗರ
ಪ್ರಬಂಧ - ಕಿರಿಯರು
ಪ್ರಥಮ: ಬಿ. ನಿಶಾ - 15 ವರ್ಷ - ಬಳ್ಳಾರಿ ಗ್ರಾಮೀಣ
ದ್ವಿತೀಯ: ಸಿ.ಕೆ. ಬೃಂದಾ - 13 ವರ್ಷ - ಬಳ್ಳಾರಿ ನಗರ
ಸಮಾಧಾನಕರ ಬಹುಮಾನ:
ವೈಭವ್ ಎನ್.ಎಸ್.ಎಂ - 12 ವರ್ಷ - ಬಳ್ಳಾರಿ ನಗರ
ಪ್ರಬಂಧ - ಹಿರಿಯರು
ಪ್ರಥಮ: ಅಪೂರ್ವ ಬಿ - 17 ವರ್ಷ - ಬಳ್ಳಾರಿ ನಗರ
ದ್ವಿತೀಯ: ಭಾವನಾ ಜಿ - 16 ವರ್ಷ - ಸಂಡೂರು
ಸಮಾಧಾನಕರ ಬಹುಮಾನ:
ಬಿ. ಗೌತಮಿ - 16 ವರ್ಷ - ಬಳ್ಳಾರಿ ಗ್ರಾಮೀಣ
ರಸಪ್ರಶ್ನೆ ಸ್ಪರ್ಧೆ
ಪ್ರಥಮ: ಕಾವೇರಿ ತಂಡ
ದ್ವಿತೀಯ: ಭದ್ರ ತಂಡ
ಸಮಾಧಾನಕರ ಬಹುಮಾನ:
ತುಂಗಾ ತಂಡ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್